27 ವರ್ಷದ ಹಿಂದಿನ ಉಡುಪಿ ಪಡುಬಿದ್ರಿ ಕೇಸ್‌ ಹಾಗೂ ಶಿವಮೊಗ್ಗ & ಸಾಗರದಲ್ಲಿ ಮಿಸ್ಸಿಂಗ್‌ ಲಿಂಕ್‌ | ನಡೆದಿದ್ದೇನು?

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024 ‌‌

ಉಡುಪಿಯಲ್ಲಿ 27 ವರ್ಷಗಳ ಹಿಂದೆ ನಡೆದಿದ್ದ ಮಾರುತಿ ಒಮಿನಿ ಕಳ್ಳತನ ಪ್ರಕರಣ ಸಾಗರದಲ್ಲಿ ಇದೀಗ ಇತ್ಯರ್ಥಗೊಂಡಿದೆ. ಪ್ರಕರಣದಲ್ಲಿ 27 ವರ್ಷಗಳ ನಂತರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನ ಹುಡುಕಾಡುತ್ತಿದ್ದ ಪೊಲೀಸರಿಗೆ ಓರ್ವ ಕಳ್ಳ  14 ವರ್ಷದ ಹಿಂದೆಯೇ ಸಾವನ್ನಪ್ಪಿರುವ ಬಗ್ಗೆ ಗೊತ್ತಾಗಿದೆ. 

1997 ಸೆಪ್ಟೆಂಬರ್‌ 29 ರಂದು ಪಡುಬಿದ್ರಿಯಲ್ಲಿ ಒಮಿನಿಯೊಂದು ಕಳ್ಳತನವಾಗಿತ್ತು. ಈ ಪ್ರಕರಣವನ್ನು ಭೇದಿಸಿದ್ದ ಪೊಲೀಸರು ಸಾಗರದಲ್ಲಿ ಕಾರು ಪತ್ತೆ ಮಾಡಿದ್ದರು. ಆನಂತರ ಸಾಗರದ ಮೂವರ ವಿರುದ್ಧ ಕೇಸ್‌ ದಾಖಲಿಸಿ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಆದರೆ ಚಾರ್ಜ್‌ಶೀಟ್‌ನಲ್ಲಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಆರೋಪಿಗಳನ್ನ ಹಾಜರುಪಡಿಸಲು

ಎಲ್‌ಪಿಸಿ ವಾರಂಟ್‌ ಅಡಿಯಲ್ಲಿ ಶಿವಮೊಗ್ಗಕ್ಕೆ ಬಂದ ಪೊಲೀಸರಿಗೆ 14 ವರ್ಷಗಳ ಹಿಂದೆಯೇ ಓರ್ವ ಆರೋಪಿ ಸಾವನ್ನಪ್ಪಿರುವ ವಿಚಾರಗೊತ್ತಾಗಿದೆ. ಹಾಗಾಗಿ ಸಂಬಂಧಪಟ್ಟ ಆಡಳಿತ ವ್ಯವಸ್ಥೆಯಿಂದ ಮರಣ ಪ್ರಮಾಣ ಪತ್ರ ಪಡೆದು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಇನ್ನೊಬ್ಬ ಆರೋಪಿಯನ್ನ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಅವರು ಬೇಲ್‌ ಪಡೆದು ವಿಚಾರಣೆ ಎದುರಿಸುತ್ತಿದ್ದಾರೆ.

SUMMARY | Omni theft case at Padubidri in Udupi and Shimoga sagar link

KEY WORDS | Omni theft case at Padubidri ‌, Udupi ,Shimoga ,sagar link

Share This Article