SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 29, 2025
ದೇಶದ ಪ್ರತಿಷ್ಠಿತ ಕಾರು ಉತ್ಪಾದಕ ಕಂಪನಿಗಳಲ್ಲಿ ಟಾಟ ಕಂಪನಿ ಸಹ ಒಂದು. ಟಾಟಾ ಸ್ಟೀಲ್ ಟಾಟಾ ವಾಟರ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಉತ್ಪಾದಿಸುತ್ತಿದ್ದ ಟಾಟ ಕಂಪನಿ ಇದೀಗ ಎಲೆಕ್ಟ್ರಿಕ್ ಬೈಕ್ ತಯಾರಿಕೆಗೆ ಸಿದ್ದವಾಗಿದೆ. ಆ ಬೈಕ್ ಹೇಗಿರಲಿದೆ, ಅದರಲ್ಲಿರುವ ವೈಶಿಷ್ಟ್ಯಗಳೇನು ಹಾಗೂ ಬೆಲೆ ಎಷ್ಟು ಎಂಬೆಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಟಾಟಾ ಮೋಟರ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್‌ನ್ನು 2025 ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ದವಾಗಿದೆ. 3.5 KWH ಲೀಥಿಯಂ ಐಯಾನ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಬೈಕ್ ಒಮ್ಮೆ ಚಾರ್ಜ್ ,ಆಡಿದರೆ 200 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಇದಕ್ಕೆ ಕಂಪನಿಯು 1 ಲಕ್ಷದ 13 ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ.
ಈ ಬೈಕ್ ಎಷ್ಟು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ, ಒಮ್ಮೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲು ತಗುಲುವ ಸಮಯವೆಷ್ಟು, ಬೈಕ್‌ನಲ್ಲಿರುವ ಇನ್ನಿತರೆ ವೈಶಿಷ್ಟ್ಯಗಳೇನು ಎಂಬೆಲ್ಲಾ ಮಾಹಿತಿಗಳು ಬೈಕ್ ಬಿಡುಗಡೆಯಾದ ನಂತರವೇ ತಿಳಿದುಬರಲಿದೆ.
SUMMARY |Tata Motors is all set to launch its first electric bike in August 2025.
KEYWORDS | Tata Motors, electric bike, August 2025,