ಒಳ ಮೀಸಲಾತಿ ಜಾರಿಗೆ ಆತುರದ ನಿರ್ಧಾರ ಸರಿಯಲ್ಲ | ಡಿ.ಆರ್. ಗಿರೀಶ್

ಹಂಚಿಕೊಳ್ಳಿ
WhatsApp Facebook X Telegram
ಒಳ ಮೀಸಲಾತಿ ಜಾರಿಗೆ ಆತುರದ ನಿರ್ಧಾರ ಸರಿಯಲ್ಲ | ಡಿ.ಆರ್. ಗಿರೀಶ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 29, 2025

ಶಿವಮೊಗ್ಗ |  ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ರಾಜ್ಯದ ಪರಿಶಿಷ್ಟ ಜಾತಿಗಳ, ಉಪ ಜಾತಿಗಳ ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸಿ ನಂತರ ಜಾರಿ ಮಾಡಬೇಕು. ಆತುರದ ನಿರ್ಧಾರ ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಬಂಜಾರ ಯುವಕರ ಹಾಗೂ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್. ಗಿರೀಶ್ ಹೇಳಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೆ ತರುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿದ್ದು, ಈ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಮತ್ತು ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲು ಎರಡು ತಿಂಗಳ ಕಾಲ ಅವಕಾಶ ಕೋರಿದೆ. ವೈಜ್ಞಾನಿಕ ವರ್ಗೀಕರಣ ಸಮೀಕ್ಷೆ ನಡೆಸಬೇಕು ಎಂಬುದನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಆದರೆ, ಈ ಪರಿಶಿಷ್ಟರ ಸಮೀಕ್ಷೆ ಕೇವಲ 40 ದಿನಗಳಲ್ಲಿ ಮುಗಿಯಲು ಸಾಧ್ಯವಿಲ್ಲ. ಲಂಬಾಣಿ ಜನಾಂಗ ಸೇರಿದಂತೆ ಇತರೆ ಜನಾಂಗದವರು ಈ ಬೇಸಿಗೆಯ ದಿನಗಳಲ್ಲಿ ತಮ್ಮ ಮನೆಗಳಿಗೆ ಬೀಗ ಹಾಕಿ ಕೆಲಸಕ್ಕಾಗಿ ವಲಸೆ ಹೋಗಿರುತ್ತಾರೆ. ಈ ಸಂದರ್ಭದಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ. ಮತ್ತು ಈಗ ಪರಿಶಿಷ್ಟ ಜಾತಿಯ ಯಾವುದೇ ದತ್ತಾಂಶಗಳನ್ನು ಸರ್ಕಾರದ ಬಳಿ ಲಭ್ಯವೂ ಇಲ್ಲ. ಆದ್ದರಿಂದ ಒಳ ಮೀಸಲಾತಿ ಜಾರಿಗೊಳಿಸುವ ಮುನ್ನ ಯಾವುದೇ ಆಯೋಗದ ವರದಿಯನ್ನು ಗಣನೆಗೆ ತೆಗೆದುಕೊಳ್ಳದೇ ಮನೆಮನೆ ಗೆ ತೆರಳಿ ನಿಖರವಾದ ಸಮೀಕ್ಷೆ ನಡೆಸಬೇಕು ಎಂದರು.

ಮುಖ್ಯವಾಗಿ ಬಿಜೆಪಿ ಸರ್ಕಾರ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ. 4.5ರಷ್ಟು ಒಳ ಮೀಸಲಾತಿ ಶಿಫಾರಸು ಮಾಡಿತ್ತು. ಕಾಂಗ್ರೆಸ್ ಸರ್ಕಾರ ಅದಕ್ಕಿಂತ ಹೆಚ್ಚು ಮಾಡಬೇಕೆ ವಿನಃ ಕಡಿಮೆ ಮಾಡಬಾರದು ಎಂದರು.

SUMMARY | With regard to the implementation of internal reservation, the government should collect scientific data of scheduled castes and subcastes in the state and then implement it.

KEYWORDS | subcastes, state,  implement,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor