2 ಇನ್‌ಸ್ಟಾಗ್ರಾಮ್‌ ಅಕೌಂಟ್‌ ಮೇಲೆ ಶಿವಮೊಗ್ಗ ಪೊಲೀಸ್‌ ಕಣ್ಣು | 12500 ಫೈನ್‌ ಜೊತೆಗೆ Before After ವಿಡಿಯೋ ರಿಲೀಸ್‌

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 21, 2025 ‌‌ ‌‌

ವೀಲ್ಹಿಂಗ್‌ ಮಾಡಿ ವಿಡಿಯೋ ತೆಗೆದು ಅದನ್ನು ಇನ್‌ಸ್ಟಾಗ್ರಾಮ್‌ ಅಕೌಂಟ್‌ಗಳಲ್ಲಿ ರೀಲ್ಸ್‌ ರೂಪದಲ್ಲಿ ಪೋಸ್ಟ್‌ ಮಾಡುವವರಿಗೆ ಸಂಚಾರಿ ಪೊಲೀಸರು, ಅವರದ್ದೆ ರೀಲ್ಸ್‌ ದೃಶ್ಯವನ್ನು ಆದರಿಸಿ ಕೇಸ್‌ ಹಾಕುತ್ತಾರೆ. ರಾಜ್ಯದ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳ ಪೋಸ್ಟ್‌ಗಳ ಮೇಲೆ ನಿಗಾ ಇಡುತ್ತಿರುವ ಪೊಲೀಸರು ಸಾಮಾಜಿಕ ಶಾಂತಿ ಹಾಗೂ ಇತರೆ ವಿಚಾರಗಳ ಪೋಸ್ಟ್‌ಗಳಷ್ಟೆ ಅಲ್ಲದೆ ಕಾನೂನು ಉಲ್ಲಂಘಿಸುವ ದೃಶ್ಯಗಳನ್ನು ಹೊಂದಿರುವ ಪೋಸ್ಟ್‌ಗಳ ಮೇಲೆಯು ಗಮನ ವಹಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ಸಂಚಾರಿ ಪೊಲೀಸರು ಶಿವಮೊಗ್ಗದ ಹೊಳೆಹೊನ್ನೂರು ಮಾರ್ಗಕ್ಕೆ ತಿರುಗುವ ಸರ್ಕಲ್‌ ಬಳಿ ಇರುವ ರೈಲ್ವೆ ಪ್ಲೈಓವರ್‌ ಮೇಲೆ ವೀಲ್ಹಿಂಗ್‌ ಮಾಡಿದ ಯುವಕನ ಮೇಲೆ ಕೇಸ್‌ ದಾಖಲಿಸಿದ್ದಾರೆ. 

ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ವೀಲ್ಹಿಂಗ್‌ ಮಾಡಿ  ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್  ಮಾಡಿದ ಆರೋಪದ ಅಡಿಯಲ್ಲಿ ಸುಮುಟೋ ಕೇಸ್‌ ದಾಖಲಿಸಿರುವ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್‌ ಠಾಣೆಯ ಪಿಎಸ್‌ಐ ಮಠಪತಿ, ದ್ವಿಚಕ್ರವಾಹವನ್ನು ಸೀಜ್‌ ಮಾಡಿದ್ದು, ಈ ಸಂಬಂಧ ಸವಾರನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಅಲ್ಲದೆ ಈ ಕುರಿತು ಕೋರ್ಟ್‌ ಮೂಲಕ 12500 ರೂಪಾಯಿ ದಂಡ ವಿಧಿಸಿದ್ದಾರೆ. ಮೇಲಾಗಿ ಬೈಕ್‌ ಸವಾರನ ಹಿನ್ನೆಲೆಯನ್ನು ಸಹ ಪರಿಶೀಲಿಸುತ್ತಿದ್ದಾರೆ. 

ಇದಿಷ್ಟು ಕಾನೂನು ಕ್ರಮಗಳ ಜೊತೆಗೆ ಪೊಲೀಸರೇ ರೀಲ್ಸ್‌ವೊಂದನ್ನು ಕ್ರಿಯೆಟ್‌ ಮಾಡಿ ಅಪ್‌ಲೋಡ್‌ ಮಾಡಿದ್ದು, ಸಾಮಾಜಿಕ ಜಗತ್ತಿಗೆ ಅರ್ಥವಾಗುವ ಹಾಗೆ ಹಾಡುಗಳನ್ನು ಬಳಸಿ ವಿಡಿಯೋವನ್ನು ತಮ್ಮ ಅಧಿಕೃತ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.



Share This Article