SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 30, 2025
ಶಿವಮೊಗ್ಗ| ಉತ್ತರ ಕರ್ನಾಟಕದ ಬಸವನ ಬಾಗೇವಾಡಿಯಲ್ಲಿ ಫೆಬ್ರವರಿ 4 ರಂದು ಕ್ರಾಂತಿವೀರ ಬ್ರಿಗೇಡ್ ಅನ್ನು 1008 ಸ್ವಾಮೀಜಿಗಳ ಪಾದ ತೊಳೆಯುವ ಮೂಲಕ ಉದ್ಘಾಟನೆ ಮಾಡುತ್ತಿದ್ದೇವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಹಿಂದೂ ಸಮಾಜದಲ್ಲಿ ವಿವಿಧ ಜಾತಿಯ ಮಠಾಧೀಶರು ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲರೂ ಸಹ ಒಂದಾಗಬೇಕು ಎನ್ನುವ ದೃಷ್ಟಿಯಿಂದ ಈ ಬ್ರಿಗೇಡ್ ಅನ್ನು ಸ್ಥಾಪಿಸುತ್ತಿದ್ದಾರೆ. ಅದಕ್ಕೆ ನನ್ನನ್ನು ಕರೆದಾಗ ನಾನು ತುಂಬಾ ಸಂತೋಷದಿಂದ ಈ ಬ್ರಿಗೇಡ್‌ನಲ್ಲಿ ಭಾಗಿಯಾದೆ ಎಂದರು.
ಉತ್ತರ ಕರ್ನಾಟಕ ದಲ್ಲಿ ಬಹುತೇಕ ಮಠಗಳು ದುಸ್ಥಿತಿಯಲ್ಲಿವೆ. ಅವು ಇನ್ನೂ ಅಬಿವೃದ್ಧಿ ಆಗಲಿಲ್ಲ. ನಾನು ಉತ್ತರ ಕರ್ನಾಟಕಕ್ಕೆ ಪ್ರವಾಸಕ್ಕೆ ಹೋದಾಗ ಮಠಗಳ ದುಸ್ಥಿತಿ ನೋಡಿ ತುಂಬಾ ಬೇಜಾರಾಯಿತು. ಆದರೂ ಸಹ ಆ ಮಠದ ಮಠಾಧೀಶರು ಹಿಂದೂ ಸಮಾಜ ಒಂದಾಗಬೇಕು ಅನ್ನೋ ಭಾವನೆಯಿಂದ ಈ ಬ್ರಿಗೇಡ್ ನಲ್ಲಿ ಶ್ರಮಿಸುತ್ತಿದ್ದಾರೆ . ಹಿಂದೂ ಧರ್ಮ ಉಳಿಸುವಂತಹ ಎಲ್ಲಾ ಸ್ವಾಮೀಜಿ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
SUMMARY | “We are inaugurating the Krantiveera Brigade on February 4 at Basavana Bagewadi in north Karnataka by washing the feet of 1008 seers,” eshwarappa said.
KEYWORDS | Krantiveera Brigade, inaugurating, Basavana Bagewadi, eshwarappa,