SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 21, 2024
ಹೊನ್ನಾವರ | ಕೋಲಾರದಿಂದ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆಂದು ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆರೋಳ್ಳಿ ತಿರುವಿನಲ್ಲಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಹಳ್ಳಿಯ ಕರ್ನಾಟಕ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ 40 ಜನ ಪ್ರವಾಸಕ್ಕೆ ಹೊನ್ನಾವರಗೆ ಬಂದಿದ್ದರು. ನಂತರ ಪ್ರವಾಸ ಮುಗಿಸಿ ಗೋಕರ್ಣದಿಂದ ಮತ್ತೆ ಕೋಲಾರಕ್ಕೆ ಬಸ್ ನಿಂದ ತೆರಳುತ್ತಿದ್ದರು. ಆ ವೇಳೆ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಘಟನೆಯಿಂದಾಗಿ 34 ವಿದ್ಯಾರ್ಥಿಗಳಿಗೆ ಗಂಬೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು, ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಉಂಟಾಗಿಲ್ಲ.
SUMMARY | More than 30 students were injured when the bus in which they were travelling from Kolar to Uttara Kannada district overturned at Arolli turn in Honnavar taluk of Uttara Kannada district after the driver lost control of the vehicle.
KEYWORDS | Uttara Kannada, Honnavar, bus accident,
