ಹೆಬ್ರಿ ಸೀತಂಬೈಲ್ ನಲ್ಲಿ ನಡೆದ ಶೂಟೌಟ್ ಘಟನೆಯಲ್ಲಿ ನಕ್ಸಲ್ ಮುಖಂಡ ವಿಕ್ರಂಗೌಡ ಸಾವನ್ನಪ್ಪಿದ್ದಾನೆ.
ಇನ್ನೂ ಈ ಬಗ್ಗೆ ಇದೀಗ ಮತ್ತೊಂದು ಮಾಹಿತಿ ಲಭ್ಯವಾಗಿದ್ದು ಈ ಶೂಟೌಟ್ ನಲ್ಲಿ ನಕ್ಸಲ್ ಸುಂದರಿ ಹಾಗು ವನಜಾಕ್ಷಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲವಾದರೂ, ಬಲ್ಲ ಮೂಲಗಳ ಪ್ರಕಾರ ,ಸೀತಂಬೈಲ್ ಗೆ ರೇಷನ್ ಸಂಗ್ರಹಕ್ಕಾಗಿ ಐವರು ನಕ್ಸಲರು ಬಂದಿದ್ದ ವೇಳೆ ANF ಟೀಂ ಕಾರ್ಯಾಚರಣೆ ನಡೆಸಿದೆ..
ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂಗೌಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ..ಇನ್ನು ಉಳಿದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ..
ಪರಾರಿಯಾದವರ ಪೈಕಿ ನಕ್ಸಲ್ ಸುಂದರಿ ಹಾಗು ವನಜಾಕ್ಷಿಗೆ ಗುಂಡೇಟು ಬಿದ್ದಿದೆ ಎಂದು ಹೇಳಲಾಗಿದೆ..ಇನ್ನಷ್ಟು ಮಾಹಿತಿ ನಿರೀಕ್ಷೆಯಲ್ಲಿದೆ ಮಲೆನಾಡು ಟುಡೆ