SHIVAMOGGA| MALENADUTODAY NEWS | ಮಲೆನಾಡು ಟುಡೆ Mar 11, 2025
ಶಿವಮೊಗ್ಗ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಹಣಗೆರೆ ಕಟ್ಟೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಟಿಪ್ಪು ನಗರದ ವ್ಯಾಪಾರಿಯೊಬ್ಬರಿಗೆ ಜೇನುಗಳು ಕಚ್ಚಿದ ಪರಿಣಾಮ ಅವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಘಟನೆ ವಿವರ
ಶಿವಮೊಗ್ಗದ ಟಿಪ್ಪು ನಗರದ ನಿವಾಸಿ 50 ವರ್ಷದ ಹಬೀಬ್ ಎಂಬವರು, ನಜ್ರುಲ್ಲಾ, ಸರ್ದಾರ್ ಎಂಬವರ ಜೊತೆಗೆ ಹಣಗೆರೆ ಕಟ್ಟೆಯಲ್ಲಿ ಬಟ್ಟೆ ವ್ಯಾಪಾರ ಮಾಡಲೆಂದು ತೆರಳುತ್ತಿದ್ದರು. ಸಿರಿಗೆರೆ ಬಳಿ ಹೋಗುತ್ತಿದ್ದಾಗ, ಇವರ ಮೇಲೆ ಜೇನು ನೊಣಗಳು ದಾಳಿ ನಡೆಸಿವೆ. ಜೇನು ದಾಳಿಯಲ್ಲಿ ಮೂವರಿಗೂ ಗಂಭೀರವಾದ ಪೆಟ್ಟಾಗಿದೆ. ತಕ್ಷಣವೇ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಆಯನೂರು ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ನಡುವೆ ಚಿಕಿತ್ಸೆ ಫಲಕಾರಿಯಾಗದೆ ಹಬೀಬ್ ಮೃತ ಪಟ್ಟಿದ್ದಾರೆ. ಈ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.