SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025
ಶಿವಮೊಗ್ಗ ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕು.ಸಾಂಘವೀ.ಆರ್.ಶಂಕರ್ ರವರಿಗೆ 2023-24 ನೇ ಸಾಲಿನ ಸ್ನಾತಕೋತ್ತರ ಮನಃಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಕುವೆಂಪು ವಿಶ್ವವಿದ್ಯಾಲಯ (Kuvempu University) ಮಟ್ಟದ ಪ್ರಥಮ ರ‍್ಯಾಂಕ್ ಲಭ್ಯವಾಗಿದೆ. ಇದೇ ಕಾಲೇಜಿನ ಕು.ದಿವ್ಯಾ.ಜಿ.ಎನ್ ರವರಿಗೆ ದ್ವಿತೀಯ ರ‍್ಯಾಂಕ್ ಹಾಗೂ ಕು.ಪಲ್ಲವಿ.ಜಿ.ಎಸ್ ರವರಿಗೆ ತೃತೀಯ ರ‍್ಯಾಂಕ್ ಹಂಚಿಕೆಯಾಗಿದೆ. ಕುವೆಂಪು ವಿಶ್ವವಿದ್ಯಾಲಯದ 34 ನೇ ಘಟಿಕೋತ್ಸವದಲ್ಲಿ ಈ ವಿದ್ಯಾರ್ಥಿನಿಯರು ಪ್ರಶಸ್ತಿ ಪತ್ರವನ್ನು ಪಡೆಯಲಿದ್ದಾರೆ.
ಪ್ರಥಮ ರ‍್ಯಾಂಕ್ ಪಡೆದ ಕು.ಸಾಂಘವೀ.ಆರ್ ರವರು ಬೆಂಗಳೂರಿನ ಎಸ್.ವಿ.ರವಿಶಂಕರ್ ಹಾಗೂ ಕೆ.ಎಸ್.ವಾಣಿಯವರ ಪುತ್ರಿಯಾಗಿದ್ದಾರೆ. ಇದೀಗ ಇದೆ ಕಾಲೇಜಿನಲ್ಲಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಎಂ ಫಿಲ್ ಅಧ್ಯಯನಕ್ಕೆ ದಾಖಲಾಗಿದ್ದಾರೆ. ಕು.ದಿವ್ಯಾ.ಜಿ.ಎನ್ ರವರು ಬೆಂಗಳೂರಿನ ಗಿರೀಶ್.ಜಿ.ವಿ ಮತ್ತು ಸುಜಾತ.ಪಿ.ಎಸ್ ರವರ ಪುತ್ರಿಯಾಗಿದ್ದಾರೆ. ಈಗ ಮಕ್ಕಳ ಮಾರ್ಗದರ್ಶನ ಕೇಂದ್ರದಲ್ಲಿ ಮನಃಶಾಸ್ತ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕು.ಪಲ್ಲವಿ.ಜಿ.ಎಸ್ ರವರು ಶಿವಮೊಗ್ಗದ ಸಂಪತ್ ಕುಮಾರ್ ಹಾಗೂ ಸರೋಜ.ಬಿ.ಎಸ್ ರವರ ಪುತ್ರಿಯಾಗಿದ್ದು. ಪ್ರಸ್ತುತ ಬೆಂಗಳೂರಿನಲ್ಲಿ ಶಾಲಾ ಆಪ್ತಸಮಾಲೋಚಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ.ರಜನಿ.ಎ.ಪೈ, ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಡಾ.ಪ್ರೀತಿ.ವಿ.ಶಾನ್‌ಭಾಗ್, ಡಾ.ವಾಮನ್ ಶಾನ್‌ಭಾಗ್, ಎಂಸಿಸಿಎಸ್ ನ ನಿರ್ದೇಶಕರಾದ ಡಾ.ರಾಜೇಂದ್ರ ಚೆನ್ನಿ, ಕಾಲೇಜಿನ ಆಡಳಿತಾಧಿಕಾರಿಯಾದ ಪ್ರೊ.ರಾಮಚಂದ್ರ ಬಾಳಿಗ, ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ, ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅರ್ಚನಾ ಭಟ್ ಹಾಗೂ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿ ಈ ಮೂವರು ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಯನ್ನು ಅಭಿನಂದಿಸಿದ್ದಾರೆ.
SUMMARY |Ashok Pai College gets three ranks in the postgraduate psychology department
KEY WORDS | Ashok Pai College gets three ranks , postgraduate psychology department