SHIVAMOGGA | MALENADUTODAY NEWS | ಮಲೆನಾಡು ಟುಡೆ
ಶಿವಮೊಗ್ಗ| ಶಿವಮೊಗ್ಗದ ಪಿಇಎಸ್ ವಾಣಿಜ್ಯ ಕಾಲೇಜಿನಲ್ಲಿ ಸೈಬರ್ ಕ್ರೈಂ ಮತ್ತು ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳ ಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಕೃಷ್ಣಮೂರ್ತಿ ಮಾತನಾಡಿ ಸಾಮಾಜಿಕ ಜಾಲತಾಣದ ಹೆಚ್ಚಿನ ಬಳಕೆಯಿಂದ ಆಗುವ ದುಷ್ಪರಿಣಾಮ ಸೇರಿದಂತೆ ಅನೇಕ ವಿಷಯಗಳ ಕುರಿತು ಈ ಕೆಳಕಂಡಂತೆ ಜಾಗೃತಿಯನ್ನು ಮೂಡಿಸಿದ್ದರು. ಅವುಗಳೆಂದರೆ
1) ಸಾಮಾಜಿಕ ಜಾಲತಾಣವನ್ನು ಅತಿಯಾಗಿ ಬಳಸುವುದರಿಂದ ವಿದ್ಯಾರ್ಥಿಗಳು ವಿಧ್ಯಾಭ್ಯಾಸದ ಮೇಲೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಹಾಗೆಯೇ ಇದು ವಿಧ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಮೊಬೈಲ್ ಫೊನ್ ಹಾಗೂ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುವಾಗ ಎಚ್ಚರಿಕೆಯಿಂದಿರಿ.
2) ಅಧಿಕ ಲಾಭಗಳಿಸುವ ಆಸೆಯಿಂದ, ಆನ್ ಲೈನ್ ಕಂಪನಿ ಮತ್ತು ವ್ಯಕ್ತಿಯ ಬಗ್ಗೆ ಪರಿಶೀಲಿಸದೇ, ಆನ್ ಲೈನ್ ಮುಖಾಂತರ ಹಣ ಹೂಡಿಕೆ ಮಾಡಬೇಡಿ. ಇದರಿಂದ ನೀವು ಹೂಡಿಕೆ ಮಾಡಿದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ., ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ.
3) ಸೈಬರ್ ವಂಚಕರು Work From Home Option ಅಥವಾ ಅಧಿಕ ಸಂಬಳದ ಆಸೆ ಹುಟ್ಟಿಸಿ, Processing charge ಎಂದು ನಿಮ್ಮಿಂದ ಹೆಚ್ಚಿನ ಹಣವನ್ನು ಕಟ್ಟಿಸಿಕೊಂಡು, ಕೆಲಸವನ್ನು ಸಹಾ ಕೊಡದೇ, ನೀವು ಕೊಟ್ಟ ಹಣವನ್ನು ಹಿಂದಿರುಗಿಸದೇ ಮೋಸ ಮಾಡುತ್ತಾರೆ. ಆದ್ದರಿಂದ ವಿಧ್ಯಾರ್ಥಿಗಳು ನಿಮ್ಮ ಶೈಕ್ಷಣಿಕ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಉದ್ಯೋಗಕ್ಕಾಗಿ ಹುಡುಕಾಟ ನಡೆಸುವಾಗ, ಆನ್ ಲೈನ್ ನಲ್ಲಿ ಕೆಲಸದ ಜಾಹಿರಾತು ನೀಡುವ ಕಂಪನಿಗಳ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ನಂತರವೇ ಮುಂದುವರೆಯಿರಿ.
4) ಯುವ ಜನತೆಯು ಫೇಸ್ ಬುಕ್, ಇನ್ ಸ್ಟಾಗ್ರಾಮ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಾಗ ಎಚ್ಚರಿಕೆಯಿಂದಿರಿ ಮತ್ತು ನಿಮ್ಮ ಖಾಸಗೀ ಹಾಗೂ ಮೌಲ್ಯಯುತ ಮಾಹಿತಿಗಳು, ವಿಡಿಯೋ, ಫೋಟೋ ಹಾಗೂ ಬ್ಯಾಂಕ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ, ಸೈಬರ್ ವಂಚಕರು ಈ ಮಾಹಿತಿಗಳನ್ನು ದುರುಪಯೋಗ ಪಡಿಸಿಕೊಂಡು ನಿಮ್ಮ ವಿರುದ್ಧವೇ ಅಸ್ತ್ರವಾಗಿ ಬಳಸಿ ನಿಮ್ಮನ್ನು ವಂಚಿಸುವ ಸಾಧ್ಯತೆ ಇರುತ್ತದೆ.
5) ಮಾದಕ ದ್ರವ್ಯ ಎಂಬುದು ಸಾಮಾಜಿಕ ಪಿಡುಗಾಗಿದ್ದು, ಮಾದಕ ದ್ರವ್ಯ ಸೇವನೆಯನ್ನು ಶುರುಮಾಡುವಾಗ ಕುತೂಹಲಕ್ಕೆಂದು ಪ್ರಾರಂಭವಾಗಿ, ನಂತರ ಮಾದಕ ದ್ರವ್ಯದ ಕಪಿ ಮುಷ್ಠಿಯಿಂದ ಹೊರಬರಲು ಸಾಧ್ಯವಾಗದೇ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಹಾಗೂ ವಿಧ್ಯಾರ್ಥಿಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಜೀವನದ ಮೇಲೂ ಕೂಡ ನೇರವಾಗಿ ದುಷ್ಪರಿಣಾಮವನ್ನು ಬೀರುತ್ತವೆ. ಆದ್ದರಿಂದ ಮಾದಕ ದ್ರವ್ಯ ವ್ಯಸನಕ್ಕೆ ದಾಸರಾಗದೇ ತಮ್ಮ ಶೈಕ್ಷಣಿಕ ಪ್ರಗತಿಯ ಬಗ್ಗೆ ಗಮನ ಹರಿಸಿ.
6) ಮಾದಕ ದ್ರವ್ಯ ಮಾರಾಟ, ಸಾಗಾಟ, ಸಂಗ್ರಹಣೆ ಹಾಗೂ ಸೇವನೆ ಮಾಡುವುದು ಕಾನೂನಿನ ರೀತ್ಯಾ ಶಿಕ್ಷಾರ್ಹ ಅಪರಾಧವಾಗಿದ್ದು, ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಒಟ್ಟಾಗಿ ಕೈ ಜೋಡಿಸಬೇಕು, ಈ ನಿಟಿನಲ್ಲಿ ವಿಧ್ಯಾರ್ಥಿಗಳಾದ ನಿಮ್ಮ ಪಾತ್ರ ಪ್ರಮುಖವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿಧ್ಯಾರ್ಥಿಗಳು, ಹಾಗೂ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.
SUMMARY| An awareness programme on cyber crime and the ill-effects of drugs was organised at PES Commerce College in Shivamogga on Wednesday.
KEYWORDS | cyber crime, PES Commerce College, Shivamogga,