SHIVAMOGGA | MALENADUTODAY NEWS | ಮಲೆನಾಡು ಟುಡೆ Dec 22, 2024
ಇತ್ತೀಚೆಗೆ ಸಂಸದ ಬಿವೈ ರಾಘವೇಂದ್ರ ಸಿಗಂದೂರು ಸೇತುವೆಯ ಚಿತ್ರವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಹಂಚಿಕೊಂಡು, ಅದರ ಸೌಂದರ್ಯವನ್ನು ವರ್ಣಿಸಿದ್ದರು. ಇದರ ಬೆನ್ನಲ್ಲೆ ಇದೀಗ ಸಿಗಂದೂರು ಸೇತುವೆಯ ಡ್ರೋಣ್ ವಿಡಿಯೋವೊಂದು ವೈರಲ್ ಆಗುತ್ತಿದೆ. ಸಿಗಂದೂರು ಸೇತುವೆ ಅಂತಿಮ ಹಂತದಲ್ಲಿದ್ದು, ಅದರ ಚಿತ್ರಣವನನ್ನ ಡ್ರೋಣ್ ಕ್ಯಾಮರಾದಲ್ಲಿ ಚಿತ್ರೀಕರಣ ಮಾಡಲು ಹಲವರು ಯತ್ನಿಸುತ್ತಿದ್ದಾರೆ. ಆದಾಗ್ಯು ಎಲ್ಲರಿಗೂ ಈ ಅವಕಾಶ ಸಿಗುತ್ತಿಲ್ಲ. ಇನ್ನೂ ಸಿಗಂದೂರಿನ ಸೇತುವೆ ಮೇಲೆ ನಾವೇ ಫಸ್ಟ್ ಓಡಾಡಬೇಕು ಎನ್ನುವರ ಸಂಖ್ಯೆಗೂ ಏನೂ ಕಡಿಮೆಯಿಲ್ಲ. ಆದರೆ ನಿರ್ಮಾಣ ಸಂಸ್ಥೆಯು ಸೇತುವೆ ಕೊನೆ, ಮೊದಲ ತುದಿಯನ್ನು ಇನ್ನಷ್ಟೆ ಸಂಪರ್ಕಿಸುತ್ತಿದೆಯಷ್ಟೆ ಹಾಗಾಗಿ ಸೇತುವೆ ಮೇಲೆ ಬುರ್ ಅಂತಾ ಓಡಾಡುವ ಅವಕಾಶಕ್ಕೂ ಇನ್ನೂ ಸ್ವಲ್ಪದಿನ ಕಾಯಬೇಕಿದೆ.
ಇದೆಲ್ಲದರ ನಡುವೆ ಸಿಗಂದೂರಿಗೆ ಬರುವ ಪ್ರವಾಸಿಗರು ತಮ್ಮ ಕ್ಯಾಮಾರಾಗಳಲ್ಲಿ ಸೇತುವೆಯ ದೃಶ್ಯವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾಗಳಲ್ಲಿ ಹಾಕುತ್ತಿದ್ದಾರೆ. ಅವರ ವಿಡಿಯೋಗಳು, ಫೋಟೋಗಳು ಸೋಶೀಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಾಗರಾಜ್ ಬೆನ್ನಿ https://www.instagram.com/nagaraj_benni/ ಎನ್ನುವ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಒಬ್ಬರು ಸಿಗಂದೂರು ಸೇತುವೆ ಹಾಗೂ ಲಾಂಚ್ ಮತ್ತು ಸಿಗಂದೂರಿನ ಹಿನ್ನೀರಿನ ಸೌಂದರ್ಯವನ್ನು ಬ್ಯಾಕ್ ಗ್ರೌಂಡ್ ಮ್ಯೂಸಿಕ್ನೊಂದಿಗೆ ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದಾರೆ. ಇವರ ವಿಡಿಯೋ ಹಲವೆಡೆ ಷೇರ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಹೊಂದಿದೆ. ವಿಡಿಯೋ ಲಿಂಕ್ ಇಲ್ಲಿದ್ದು ಅದನ್ನು ನೀವು ಕೂಡ ನೋಡಬಹದು.
SUMMARY | Drone footage of Sigandur bridge goes viral
KEY WORDS | Drone footage of Sigandur bridge goes viral
