ಸಾಗರ ಪೇಟೆಯಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಬೈಕ್‌ ರ್ಯಾಲಿ

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 16, 2025 ‌‌ ‌‌

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಟೌನ್‌ ಗಾಂಧಿ ಮೈದಾನದಲ್ಲಿ ಇದೇ ಸೋಮವಾರ ಅಂದರೆ ನಾಳೆ  ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ಹಾಗೂ ಹಿಂದು ಮಾರ್ಚ್‌ 17 ಕ್ಕೆ ಸಾಗರದಲ್ಲಿ ಹಿಂದೂ ಸಾಮ್ರಾಜ್ಯೋತ್ಸವ !  ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾಗರದಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಬೈಕ್ ರ್ಯಾಲಿ ನಡೆಸಿದೆ. 

ಸಾಗರ ಪೇಟೆಯ ಗಣಪತಿ ದೇವಸ್ಥಾನ ದಿಂದ ಪ್ರಾರಂಭಗೊಂಡ ಬೈಕ್ ರ್‍ಯಾಲಿ ನಗರದ ಪ್ರಮುಖ ರಸ್ತೆಗಳಾದ ಅಶೋಕ್ ರಸ್ತೆ, ಮಾರ್ಕೆಟ್ ರಸ್ತೆ, ತಿಲಕ್ ರಸ್ತೆ, ಜೋಗ ರಸ್ತೆ ಹಾಗೂ ಬಿಹೆಚ್ ರಸ್ತೆಯಲ್ಲಿ ಸಾಗಿ ಬಂತು. ಮಹಿಳೆಯರು ಸೇರಿದಂತೆ ಹಿಂದೂ ಸಂಘಟನೆಯ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ ಸಾಗುತ್ತಾ ಘೋಷಣೆಗಳನ್ನು ಕೂಗಿದರು. ಕೇಸರಿ ಧ್ವಜಗಳು ಬೈಕ್‌ ರ್ಯಾಲಿಯಲ್ಲಿ ರಾರಾಜಿಸಿದವು.  ಇನ್ನೂ ಬೈಕ್‌ ರ್ಯಾಲಿ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚು ಭದ್ರತೆಯನ್ನು ಒದಗಿಸಿದ್ದರು. 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು