SHIVAMOGGA| MALENADUTODAY NEWS | ಮಲೆನಾಡು ಟುಡೆ Mar 14, 2025
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪೇಟೆಯಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಗೋವಾ ಮದ್ಯವನ್ನು ವಶಕ್ಕೆ ಪಡೆದು, ಕೇಸ್ ದಾಖಲಿಸಿದ್ದಾರೆ.
ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಆದರಿಸಿ ವಾಹನವೊಂದನ್ನು ತಪಾಸಣೆಗೆ ಒಳಪಡಿಸಿದ ಅಬಕಾರಿ ಇಲಾಖೆ ಅದಿಕಾರಿಗಳು ಅದರಲ್ಲಿದ್ದ ಮದ್ಯವನ್ನು ಜಪ್ತು ಮಾಡಿದ್ದು, ಈ ಸಂಬಂಧ ವ್ಯಕ್ತಿಯೊಬ್ಬರನ್ನು ಬಂಧಿಸಿದೆ. ಸಾಗರ ನಗರದ ಕಾಗೋಡು ತಿಮ್ಮಪ್ಪ ಬಡಾವಣೆ ಸಮೀಪದ ಲೇಔಟ್‌ವೊಂದರ ಬಳಿ ಕಾರ್ಯಾಚರಣೆ ನಡೆಸಲಾಗಿದೆ
ಮದ್ಯ ಸಾಗಿಸಲು ಬಳಸಲಾಗಿದ್ದ ಕಾರು ಹಾಗೂ 138.06 ಲೀ. ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಡಿವೈಎಸ್‌ಪಿ ಶೀಲಾ ದರ್ಜಕರ್, ಇನ್‌ಸ್ಪೆಕ್ಟರ್ ಭಾಗ್ಯಲಕ್ಷ್ಮಿ, ಸಂದೀಪ್ ಎಲ್.ಸಿ., ಸಿಬ್ಬಂದಿ ಗುರುಮೂರ್ತಿ, ದೀಪಕ್, ಮಲ್ಲಿಕಾರ್ಜುನ ಹಾಗೂ ಸಚಿನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.