SHIVAMOGGA| MALENADUTODAY NEWS | ಮಲೆನಾಡು ಟುಡೆ Mar 17, 2025
ಕಳೆದ ಶನಿವಾರ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಡಿಕಟ್ಟೆ ಬಳಿ ಸಂಭವಿಸಿದ್ದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 30 ವರ್ಷ ನೃತ್ಯ ಕಲಾವಿದ ಹಾಗೂ ನಾಟಿ ವೈದ್ಯ ಮಣಿಕಂಠರವರು ನಿನ್ನೆ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಏನಿದು ಘಟನೆ
ಕಳೆದ ಶನಿವಾರ ಗಡಕಟ್ಟೆ ಗ್ರಾಮಕ್ಕೆ ತೆರಳಿದ್ದು ಮಣಿಕಂಠರವರ ಬೈಕ್‌ಗೆ ಹರುಡಿಕೆ ಬಳಿ ಕಾರೊಂದು ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಣಿಕಂಠರವರನ್ನು ಶಿವಮೊಗ್ಗ ಸಿಟಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ನಿನ್ನೆ ದಿನ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ನಾಟ್ಯ ತರಂಗ ಸಂಸ್ಥೆಯಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ತರಬೇತಿ ಪಡೆದಿದ್ದ ಮಣಿಕಂಠ ನಾಟಿವೈದ್ಯರಾಗಿಯು ಪರಿಚಿತರಾಗಿದ್ದರು.