SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024
ಶಿವಮೊಗ್ಗ ನಗರದ ವಾಜಿಪೇಯಿ ಬಡಾವಣೆಯಲ್ಲಿರುವ ಸರ್ಕಾರಿ ಹಾಸ್ಟೆಲ್‌ಗಳಿಗೆ ನಿನ್ನೆ ದಿನ ರಾತ್ರಿ ಹೊರಗಡೆಯ ಯುವಕರು ನುಗ್ಗಿ ಗಲಾಟೆ ಮಾಡಿದ್ದಾರೆ ಎಂಬ ವಿಚಾರ ಕೇಳಿಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋವೊಂದು ಹರಿದಾಡುತ್ತಿದ್ದು. ಹೊರಗಡೆಯ ಯುವಕರು ಹಾಗೂ ಹಾಸ್ಟೆಲ್‌ನ ವಿದ್ಯಾರ್ಥಿಗಳ ನಡುವೆ ಹೊಯ್ ಕೈ ನಡೆಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ
ಏನಿದು ಘಟನೆ
ಅಟಲ್ ಬಿಹಾರಿ ವಾಜಿಪೇಯಿ ಬಡಾವಣೆಯಲ್ಲಿ ಎರಡು ಹಾಸ್ಟೆಲ್‌ಗಳಿವೆ. ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ . ಇನ್ನೊಂದು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್. ವಿದ್ಯಾರ್ಥಿ ಮೂಲಗಳ ಮಾಹಿತಿ ಪ್ರಕಾರ, ನಿನ್ನೆ ರಾತ್ರಿ ಈ ಹಾಸ್ಟೆಲ್‌ಗಳಲ್ಲಿ ಗಲಾಟೆ ನಡೆದಿದೆ.
ನಡೆದಿದ್ದೇನು?
ಇಲ್ಲಿನ ಹಾಸ್ಟೆಲ್ ಒಂದರಲ್ಲಿ ವಿದ್ಯಾರ್ಥಿಯೊಬ್ಬರ ಹುಟ್ಟುಹಬ್ಬ ಇತ್ತು ಎನ್ನಲಾಗಿದೆ. ನಿನ್ನೆ ದಿನ ರಾತ್ರಿ 8.30 ರ ಹೊತ್ತಿಗೆ ಹುಟ್ಟುಹಬ್ಬ ಆಚರಣೆ ಸಂಬಂಧ ಹೊರಗಡೆಯಿಂದ ಕೆಲವು ಯುವಕರು ಹಾಸ್ಟೆಲ್ ಒಳಗೆ ಬಂದಿದ್ದಾರೆ. ಆ ಬಳಿಕ ಕುಡಿದು ಗಲಾಟೆ ಆರಂಭಿಸಿದ್ದಾರೆ. ಎರಡು ಇಲಾಖೆಗೆ ಸೇರಿದ ಹಾಸ್ಟೆಲ್‌ನಲ್ಲಿ ಯುವಕರು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಹಾಸ್ಟೆಲ್‌ನಲ್ಲಿನ ವಿದ್ಯಾರ್ಥಿಗಳ ಜೊತೆ ಕಿರಿಕ್ ತೆಗೆದಿದ್ದು, ಘಟನೆಯಲ್ಲಿ ಕೆಲವರು ಏಟು ಸಹ ತಿಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂಥೆ ಒಂದುವರೆ ನಿಮಿಷದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಈ ಘಟನೆ ನಡೆದ ವೇಳೆಯಲ್ಲಿ ಹಾಸ್ಟೆಲ್ ವಾರ್ಡನ್‌ಗಳು ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಅಲ್ಲದೆ ಘಟನೆ ನಡೆದ ಬಳಿಕವು ವಾರ್ಡನ್ ಈ ಬಗ್ಗೆ ವಿಚಾರಿಸಿಲ್ಲ ಎಂದು ದೂರಲಾಗಿದೆ. ಅದೃಷ್ಟಕ್ಕೆ ನಿನ್ನೆ ಯಾವುದೇ ಅಪಾಯ ಸಂಭವಿಸಿಲ್ಲ. ಹೊರಗಡೆಯಿಂದ ಹಾಸ್ಟೆಲ್‌ಗೆ ಯುವಕರು ಬರಲು ಅವಕಾಶವಾಗಿದ್ದು ಹೇಗೆ ಎಂದು ವಿದ್ಯಾರ್ಥಿ ಸಂಘಟನೆಯ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಸದ್ಯ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ವಿಡಿಯೋವನ್ನ ಬಾಲಕರ ಹಿತದೃಷ್ಟಿಯಿಂದ ಮಲೆನಾಡು ಟುಡೆ ಬಹಿರಂಗಗೊಳಿಸುತ್ತಿಲ್ಲ. ಮತ್ತು ಈ ಬಗ್ಗೆ ಅಧಿಕಾರಿಗಳನ್ನ ಸಂಪರ್ಕಿಸುವ ಪ್ರಯತ್ನ ಮಾಡಲಾಗಿದೆಯಾದರೂ ಯಾವುದೇ ಫಲ ನೀಡಿಲ್ಲ. ಇನ್ನೂ ನಡೆದ ಘಟನೆಯ ಬಗ್ಗೆ ಪೊಲೀಸ್ ಇಲಾಖೆಗು ಇನ್ನೂ ಮಾಹಿತಿ ರವಾನೆಯಾಗಿಲ್ಲ ಎಂದು ಗೊತ್ತಾಗಿದೆ.
SUMMARY | Devaraj Urs Backward Classes Post-Matric Boys Hostel , Vajipeyi Layout in Shivamogga , Social Welfare Department,
KEY WORDS | Devaraj Urs Backward Classes Post-Matric Boys’ Hostel at Vajipeyi Layout in Shivamogga , Social Welfare Department,