SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 26, 2025
ಪ್ರಪಂಚದಲ್ಲಿ ದಿನನಿತ್ಯ ಮನುಷ್ಯರ ಜೀವನದಲ್ಲಿ ಒಂದಲ್ಲ ಒಂದು ಪವಾಡಗಳು ನಡೆಯುತ್ತಿರುತ್ತವೆ. ಈ ಹಿಂದೆಯೂ ಸಹ ಅಂಥಹ ಅನೇಕ ಪವಾಡಗಳನ್ನು ನಾವು ನೋಡಿದ್ದೇವೆ. ಅದರಲ್ಲಿ ಜೀವ ಹೋದ ವ್ಯಕ್ತಿಗಳಿಗೆ ಇನ್ನೊಮ್ಮೆ ಜೀವ ಬಂದಿರವ ಘಟನೆಗಳು ಸಹ ಒಂದು. ಇಂಥಹ ಪ್ರಕರಣಗಳು ಬಹಳ ಅಪರೂಪವಾಗಿದ್ದರೂ ಸಹ ಅಂತಹದ್ದೇ ಒಂದು ಘಟನೆ ಭದ್ರಾವತಿಯಲ್ಲಿ ನಡೆದಿದೆ. ಅದೇನೆಂದರೆ ಒಬ್ಬರು ಮಹಿಳೆಗೆ ಜೀವ ಹೋಯಿತೆಂದು ವೈದ್ಯರು ಘೋಷಿಸಿದ್ದರು ಆದರೆ ನಂತರ ಆಕೆ ಬದುಕಿ ಬಂದಿದ್ದಾರೆ.
ಭದ್ರಾವತಿಯ 52 ವರ್ಷದ ಮೀನಾಕ್ಷಿ ಎಂಬುವವರನ್ನು ಸೋಮವಾರ ಅನಾರೋಗ್ಯದ ಹಿನ್ನಲೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ವೈದ್ಯರು ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಈ ಹಿನ್ನಲೆ ಮಹಿಳೆಯ ಶವವನ್ನು ಮನೆಗೆ ತರಲಾಯಿತು. ಮನೆಗೆ ತಂದು ಇಳಿಸಿದ ನಂತರ ಮಹಿಳೆ ಒಮ್ಮೆಲೆ ಕಣ್ಣು ತೆರೆದು ಉಸಿರಾಡಿದ್ದಾರೆ. ಇದರಿಂದ ಅಚ್ಚರಿಗೊಂಡ ಮನೆಯವರು ಅವರನ್ನು ಕೂಡಲೇ ಮನೆಯ ಬಳಿ ಇರುವ ಖಾಸಗಿ ನರ್ಸಿಂಗ್ ಹೋಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಹಿಳೆಯನ್ನು ಸಂಪೂರ್ಣವಾಗಿ ತಪಾಸಣೆ ಮಾಡಿದ ವೈದ್ಯರು ಆಕೆಯ ನಾಡಿ ಬಡಿತವನ್ನು ಪರಿಶೀಲಿಸಿ ಉಸಿರಾಟ ಮತ್ತು ನಾಡಿಬಡಿತ ಎಲ್ಲವೂ ಸಹಜವಾಗಿದೆ ಎಂದು ಖಚಿತ ಪಡಿಸಿದರು. ನಂತರ ಅವರನ್ನು ಶಿವಮೊಗ್ಗದ ನಾರಾಯಣ ಹೃದಯಾಲಯ ಅಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಈ ಘಟನೆಯಿಂದ ಕುಟುಂಬಸ್ಥರಿಗೆ ಹಾಗೂ ಅಲ್ಲಿ ಮಹಿಳೆ ಮೃತಪಟ್ಟರೆಂದು ಭಾವಿಸಿದ್ದ ಜನರಿಗೆ ಅಚ್ಚರಿಯುಂಟಾಯಿತು. ಅಷ್ಟೇ ಅಲ್ಲದೆ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದೃಷ್ಟ ಎಂಬುದು ಗಟ್ಟಿ ಇದ್ದರೆ ಯಮ ಬಂದರೂ ಸಹ ಏನು ಮಾಡಲು ಸಾಧ್ಯವಿಲ್ಲ ಎಂಬ ಮಾತು ಈ ಘಟನೆಯಿಂದ ನಿಜವಾಗಿದೆ.
SUMMARY | After being brought home, the woman suddenly opened her eyes and breathed.
KEYWORDS | woman, breathed, death, Bhadravati,