SHIVAMOGGA | MALENADUTODAY NEWS | ಮಲೆನಾಡು ಟುಡೆ Jan 8, 2025
ರಿಯಲ್ ಟ್ರಾಫಿಕ್ ಪೊಲೀಸರ ಬದಲು ಬೆಚ್ಚಪ್ಪ ಮಾದರಿಯ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಕಟೌಟ್‌ಗಳನ್ನು ಶಿವಮೊಗ್ಗದಲ್ಲಿ ನಿಲ್ಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಿನೆದಿನ ಮೆಗ್ಗಾನ್ ಆಸ್ಪತ್ರೆಯ ಮುಂಭಾಗದಲ್ಲಿ ಕಟೌಟ್ ನಿಲ್ಲಿಸಲಾಗಿದೆ. ದುಬಾರಿ ದಂಡಕ್ಕೆ ಹೆಸರಾಗಿರುವ ಶಿವಮೊಗ್ಗ ಟ್ರಾಫಿಕ್ ಪೊಲೀಸರು, ಮುಖ್ಯ ರಸ್ತೆಯಲ್ಲಿ ಗೋ ಸ್ಲೋ ಎಂದು ಹಿಡಿದಿರುವ ಟ್ರಾಫಿಕ್ ಪೊಲೀಸ್ ಕಟೌಟ್ ನಿಲ್ಲಿಸುತ್ತಿರುವುದು ಉತ್ತಮ ಬೆಳವಣಿಗೆ
ಇತ್ತೀಚೆಗೆ ಸರ್ಕಿಟ್ ಹೌಸ್ ಬಳಿ ಇಬ್ಬರು ಬೈಕ್ ಸವಾರರು ಸ್ಪೀಡಾಗಿ ಬಂದು ತಮ್ಮ ಜೀವ ಕಳೆದುಕೊಂಡಿದ್ದರು. ಮತ್ತೊಂದೆಡೆ ಕ್ಯಾಮರಾ ಹಾಕಿ ಸ್ಪೀಡ್ ಲಿಮಿಟ್ ಫೈನ್ ಹಾಕಿದ್ದನ್ನು ಪ್ರಶ್ನಿಸಿದ್ದ ಪರ ಊರಿನ ಪ್ರವಾಸಿಗೊಬ್ಬರು, ಸ್ಪೀಡ್ ಲಿಮಿಟ್ ಎಷ್ಟಿದೆ ಎಂಬ ಬೋರ್ಡ್ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದರು. ಈ ನಿಟ್ಟಿನಲ್ಲಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಇದೀಗ ಗೋ ಸ್ಲೋ ಪೊಲೀಸ್ ಕಟೌಟ್ ನಿಲ್ಲಿಸುತ್ತಿದ್ದಾರೆ.
ಸಿಟಿಯಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಹೆಚ್ಚಿರುತ್ತೋ ಅಲ್ಲೆಲ್ಲಾ ಈ ಟ್ರಾಫಿಕ್ ಪೊಲೀಸ್ ಕಟೌಟ್‌ಗಳನ್ನ ಹಾಕಲು ಇಲಾಖೆ ಮುಂದಾಗಿದೆ. ನಿನ್ನೆ ದಿನವೊಂದರಲ್ಲಿಯೇ ಮೆಗ್ಗಾನ್ ಆಸ್ಪತ್ರೆ ಕ್ರಾಸ್ ಸೇರಿದಂತೆ ಗಾಡಿಕೊಪ್ಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಶಾಲೆ ಸರ್ಕಲ್, ಮಹೇಂದ್ರ ಶೋ ರೂಂ ಮುಂಭಾಗದ ಕ್ರಾಸ್ ಮತ್ತು ಸೂಳೇಬೈಲು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಕಟೌಟ್ ನಿಲ್ಲಿಸಿದ್ದಾರೆ. ಇದನ್ನು ಖುದ್ದು ಎಸ್‌ಪಿ ಮಿಥುನ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಅಂದರೆ, ಈ ಟ್ರಾಫಿಕ್ ಪೊಲೀಸ್ ಕಟೌಟ್ ರಿಪ್ಲೆಕ್ಟರ್ ಹೊಂದಿದ್ದು, ಎದುರಗಡೆ ದೂರದಿಂದ ನೋಡಿದರೆ, ನಿಜವಾದ ಟ್ರಾಫಿಕ್ ಪೊಲೀಸ್ ನಿಂತಂತೆ ಕಾಣುತ್ತದೆ. ಅಲ್ಲದೆ ರಿಪ್ಲೆಕ್ಟರ್‌ನಿಂದ ರಾತ್ರಿ ವೇಳೆಯು ಸಹ ವಾಹನಗಳಿಗೆ ಕಟೌಟ್ ಹಾಗೂ ಬೋರ್ಡ್ ಕಾಣುತ್ತದೆ.
SUMMARY | cutout of a traffic policeman holding a signboard saying Go Slow on the national highway near Shivamogga Traffic Police Gadikoppa.
KEY WORDS | cutout of a traffic policeman,Go Slow signboard on the national highway , Shivamogga Traffic Police, Gadikoppa