SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024
ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ನಡೆದ ರಾಜೇಶ್ ಶೆಟ್ಟಿ ಕೊಲೆ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸುತ್ತಿದೆ. ಇವತ್ತು ಪ್ರಕರಣದಲ್ಲಿ ಅರೆಸ್ಟ್ ಆದವರು ಹೆಚ್ಚುವರಿ ಆರೋಪಿಗಳು ಎನ್ನಲಾಗುತ್ತಿದೆ. ಏಕೆಂದರೆ ಪ್ರಕರಣದ ಎಫ್‌ಐಆರ್ ಪ್ರಕಾರ, ಪ್ರಮುಖ ಆರೋಪಿಗಳು ಐವರು. ವಿನೋಬನಗರ ಪೊಲೀಸ್ ಠಾಣೆಯಲ್ಲಿ BHARATIYA NYAYA SANHITA (BNS), 2023 (U/s-189(2),189(4),191(2),191(3),103,190) ದಾಖಲಾದ FIR ಪ್ರಕಾರ ಕರಿಯಾ ವಿನಯ್, ಹೇಮಂತ , ಸಂದೀಪ , ಸಂದೇಶ , ರಮೇಶ್ ರೆಡ್ಡಿ ಪ್ರಮುಖ ಆರೋಪಿಗಳು ಉಳಿದವರು ಏ5 ಆಂಡ್ ಇತರರು ಎಂದು ತೋರಿಸಲಾಗಿದೆ. ಇವತ್ತು ಸೆರೆ ಸಿಕ್ಕವರು ಚಿಟ್ಟೆ ನಾಗ, ಗಣೇಶ, ಕಿರಣ್ ಗೌಡ, ವೆಂಕಟೇಶ್ ಎನ್ನಲಾಗುತ್ತಿದೆ. ಹಾಗಾದ ಪಕ್ಷದಲ್ಲಿ ಪ್ರಕರಣದ ಪ್ರಮುಖ ಆರೋಪಿಗಳು ಇನ್ನಷ್ಟೆ ಸಿಗಬೇಕಿದೆ.
30/11/2024 ರಂದು ಮದ್ಯಾಹ್ನ ನಡೆದ ಘಟನೆ ಸಂಬಂಧ ಮಂಜುನಾಥ ಅಲಿಯಾಸ್ ಚಳಿ ದೂರು ಕೊಟ್ಟಿದ್ದಾನೆ. ತನ್ನ 20 ವರ್ಷದ ಸ್ನೇಹಿತ ರಾಜೇಶ್ ಶೆಟ್ಟಿ ಕೊಲೆಗೆ ಕಾರಣ ಏನು ಎನ್ನುವುದನ್ನ ದೂರಿನಲ್ಲಿ ತಿಳಿಸಿರುವ ಆತ ಬಿಜೆಪಿ ಮುಖಂಡನ ಸಾವಿನ ಸಂದರ್ಭದಲ್ಲಿ ನಡೆದ ಗಲಾಟೆಯ ಕೃತ್ಯವನ್ನು ಸಹ ತಿಳಿಸಿದ್ದಾನೆ.
ನಾನು ಮತ್ತು ರಾಜೇಶ್ ಶೆಟ್ಟಿರವರು 20 ವರ್ಷಗಳಿಂದ ಸ್ನೇಹಿತರಾಗಿದ್ದೆವು. ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಳ್ಳುತ್ತಿದ್ದೆವು.. ರಾಜೇಶ್ ಶೆಟ್ಟಿ ತಂದೆ ತಾಯಿ ನಮ್ಮ ಮನೆಯ ಎದುರುಗಡೆ ವಾಸವಿದ್ದ. ಅವರ ಜೊತೆಯಲಿಯೇ ರಾಜೇಶ ಶೆಟ್ಟಿಯು ವಾಸವಿದ್ದ. ರಾಜೇಶ್ ಶೆಟ್ಟಿ ಮದುವೆಯಾಗಿ 20 ವರ್ಷಗಳಾಗಿದೆ. ಒಂದು ವರ್ಷದ ಹಿಂದೆ ಆತನ ಹೆಂಡತಿ ಮತ್ತು ಮಗ ರಾಜೇಶ್‌ನಿಂದ ದೂರವಾಗಿದ್ದರು. ಮೂರುವರೆ ತಿಂಗಳ ಹಿಂದೆ ಬೊಮ್ಮನಕಟ್ಟೆಯ ಪುರುಷೋತ್ತಮ ಎಂಬುವವರು ಮೃತ ಪಟ್ಟಿದ್ದರು. ಅವರ ಶವ ಸಂಸ್ಕಾರಕ್ಕೆ ರಾಜೇಶ್ ಶೆಟ್ಟಿ, ಕರಿಯ @ ವಿನಯ, ಕಿರಣ, ಸಂದೀಪ, ಸಂದೇಶ, ಹೇಮಂತ ರಮೇಶ್ ರೆಡ್ಡಿ ರವರುಗಳು ಹೋಗಿದ್ದರು. ಅಲ್ಲಿ ಮದ್ಯಪಾನ ಮಾಡಿದ ಬಳಿಕ ಮಾತು ಮಾತಲಿ. ಕರಿಯ ವಿನಯ್ ಮತ್ತು ರಾಜೇಶ್ ಶೆಟ್ಟಿ ಜಗಳ ಮಾಡಿಕೊಂಡಿದ್ರು. ನಂತರ ರಾಜೇಶ್ ಶೆಟ್ಟಿಯು ನನ್ನ ಮನೆಯ ಹತ್ತಿರ ಬಂದು ಕರಿಯ ವಿನಯ್ ಹಾಗು ಆತನ ಸ್ನೇಹಿತರು ನನಗೆ ಹೊಡೆದಿದ್ದಾರೆ. ನೀನು ಬಾ ಹೋಗೋಣ ಮಾತಾಡೋಣ ಅಂತಾ ಕರೆದಿದ್ದ. ಬಳಿಕ ನಾನು ಮತ್ತು ರಾಜೇಶ್ ಶೆಟ್ಟಿ ಬೈಕಿನಲಿ, ಮಚ್ಚು ಹಿಡಿದುಕೊಂಡು ಬೊಮ್ಮನಕಟ್ಟೆ ಕೊನೆ ಬಸ್ ನಿಲ್ದಾಣದ ಹತ್ತಿರ ತೆರಳಿದ್ದೆವು. ಅಲ್ಲಿ ನಮಗೂ ಹಾಗು ಅವರಿಗೂ ಜಗಳವಾಗಿ ನಾನು ವಿನಯನ ಎಡಗೈ ಗೆ ಹೊಡೆದು ರಕ್ತಗಾಯ ಪಡಿಸಿದೆ ಅನಂತರ ನಾವು ತೀರ್ಥಹಳ್ಳಿ ಕಡೆಗೆ ಹೊರಟು ಹೋದೆವು ಈ ಬಗ್ಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
30/11/2024 ರಂದು ಬೆಳಗ್ಗೆ ತನ್ನ ಮನೆಯಲಿಯೇ ಇದ್ದ ರಾಜೇಶ್ ಶೆಟ್ಟಿ ನನ್ನ ಮನೆಯ ಹತ್ತಿರ ಬಂದು ನನ್ನನ್ನು ಮಾತನಾಡಿಸಿ ತಿಂಡಿ ತಿಂದು ತೆರಳಿದ್ದ. ಗ್ಯಾರೇಜಿನಲಿ ಬೈಕ್ ರಿಪೇರಿಗೆ ಬಿಟ್ಟಿದ್ದೇನೆ, ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋಗಿದ್ದ. ಆ ಬಳಿಕ ವ್ಯಕ್ತಿಯೊಬ್ಬರು ಪೋನ್ ಮಾಡಿ ರಾಜೇಶನಿಗೆ ಯಾರೋ ಹೊಡೆದಿದ್ದಾರೆ ಎಂದು ಮಾಹಿತಿ ನೀಡಿದರು ಎಂದು ಮಂಜ ನೀಡಿದ ದೂರಿನನ್ವಯ ಎಫ್‌ಐಆರ್ ನಲ್ಲಿ ಹೇಳಲಾಗಿದೆ.
ಇನ್ನೂ ಘಟನೆ ಸಂಬಂಧ ಇವತ್ತು ವಿನೋಬನಗರ ಪೊಲೀಸ್ ಠಾಣೆ ಪೊಲೀಸರು ನಾಲ್ವರನ್ನ ಅರೆಸ್ಟ್ ಮಾಡಿದ್ದಾರೆ. ಅವರನ್ನ ಮಾರಕಾಸ್ತ್ರಗಳನ್ನ ಜಪ್ತಿ ಮಾಡಲು ಕರೆದೊಯ್ದಿದ್ದ ಪೊಲೀಸರು ಬೊಮ್ಮನಕಟ್ಟೆ ಚಾನಲ್ ಬಳಿಯಲ್ಲಿ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನ ಸೀಜ್ ಮಾಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದಷ್ಟೆ ಅಲ್ಲದೆ ಪ್ರಕರಣದ ಮಾಸ್ಟರ್ ಮೈಂಡ್ ಬೇರೆಯವನಿದ್ದು, ಆತನ ಬಗ್ಗೆಯು ಪೊಲೀಸರು ತಲಾಶ್ ಮಾಡುತ್ತಿದ್ದಾರೆ ಎನ್ನಲಾಗಿದೆ.
SUMMARY | Rajesh Shetty murder case at Bommanakatte, FIR registered at Vinobaganagar police station
KEY WORDS | Rajesh Shetty murder case at Bommanakatte, FIR registered at Vinobaganagar police station