ಶಿವಮೊಗ್ಗ ಸಿಟಿ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸಾವು | ನಡೆದಿದ್ದೇನು ಗೊತ್ತಾ?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 12, 2025 ‌‌ 

ಶಿವಮೊಗ್ಗ ನಗರದಲ್ಲಿಯೇ ಇವತ್ತು ಅನಾಹುತವೊಂದು ನಡೆದು ಹೋಗಿದೆ. ಇಲ್ಲಿನ ಮೈಲಾರೇಶ್ವರ ದೇವಾಲಯದ ಬಳಿಯಲ್ಲಿ ನಗರ ಸಾರಿಗೆ ಬಸ್‌ನಿಂದ ಬಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾರೆ. ಗುರುಪುರದಿಂದ ಆತ ಸಿಟಿಯಲ್ಲಿನ ಕಾಲೇಜಿಗೆ ಬರುವಾಗ ಈ ಘಟನೆ ಸಂಭವಿಸಿದೆ. 

ಮೃತ ವಿದ್ಯಾರ್ಥಿಯ ಹೆಸರು ಯಶವಂತ್‌. ಈತ ನಗರ ಸಾರಿಗೆ ಬಸ್‌ನಲ್ಲಿ ಬರುತ್ತಿದ್ದ. ಬಸ್‌ನ ಪುಟ್‌ ಬೋರ್ಡ್‌ ಮೇಲೆ ನಿಂತು ಪ್ರಯಾಣಿಸುತ್ತಿದ್ದ.  ಸಿಟಿ ಬಸ್‌ ಮೈಲಾರೇಶ್ವರ ದೇವಾಲಯದ ಬಳಿ ಬರುವಾಗ, ಚಾಲಕ ಬ್ರೇಕ್‌ ಹಾಕಿದ್ದಾನೆ. ಇದಕ್ಕಿದ್ದಂತೆ ಬ್ರೇಕ್‌ ಬಿದ್ದ ಹಿನ್ನೆಲೆಯಲ್ಲಿ ಪುಟ್‌ ಬೋರ್ಡ್‌ನ ಮೇಲಿದ್ದ ವಿದ್ಯಾರ್ಥಿ ಬಸ್‌ನಿಂದ ಕೆಳಕ್ಕೆ ಬಿದ್ದಿದ್ದಾನೆ. 

ಘಟನೆಯ ಸಂಬಂಧ ಪೂರ್ವ ಸಂಚಾರಿ ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸ್ತಿದ್ದಾರೆ. ಆದಾಗ್ಯು ವಿದ್ಯಾರ್ಥಿಯ ಸಾವು ಬಸ್‌ನಲ್ಲಿ ಸಂಚರಿಸುವ ನೂರಾರು ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸರು ಸಹ ಆಗಾಗ ಬಸ್‌ಗಳ ಮೇಲೆ ನಿಗಾ ಇಡುವುದು ಉತ್ತಮ

SUMMARY  |student died after fell down from city bus in shivamogga

KEY WORDS | student died , city bus in shivamogga

Share This Article