SHIVAMOGGA | MALENADUTODAY NEWS | ಮಲೆನಾಡು ಟುಡೆ Feb 4, 2025
ಶಿವಮೊಗ್ಗ ಸಿಟಿಯಲ್ಲಿ ಓಡಾಡುವ ಆಟೋಗಳಿಗೆ ಮೀಟರ್ ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮೀಟರ್ ಅಳವಡಿಸದ ಆಟೋ ಚಾಲಕರಿಗೆ ಫೈನ್ ಹಾಕಲಾಗುತ್ತಿದೆ. ಇದರ ನಡುವೆ ಆಟೋ ಮೀಟರ್‌ನಲ್ಲಿ ಪ್ರತಿಕಿಲೋಮೀಟರ್‌ಗೆ ಎಷ್ಟು ದರ ವಿಧಿಸಲಾಗುತ್ತಿದೆ ಎಂಬ ಮಾಹಿತಿ ಸಾರ್ವಜನಿಕರ ಅನಕೂಲಕ್ಕಾಗಿ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಬಿಡುಗಡೆ ಮಾಡಿದೆ.
ಆಟೋ ಮೀಟರ್ ಇದ್ದಾಗ್ಯು ಕೆಲವು ಆಟೋ ಚಾಲಕರು ಮೀಟರ್ ಹಾಕದೇನೆ ಆಟೋ ಓಡಿಸುತ್ತಿರುವುದು ಗ್ರಾಹಕರಿಗೆ ಸಮಸ್ಯೆ ಮೂಡಿಸುತ್ತಿದೆ. ಮತ್ತೆ ಕೆಲವು ಆಟೋ ಚಾಲಕರು, ಟ್ರಾಫಿಕ್ ಪೊಲೀಸರು ಕಂಡ ತಕ್ಷಣ ಮೀಟರ್ ತಿರುಗಿಸುತ್ತಿರುವುದು ಕಂಡು ಬರುತ್ತಿದೆ. ಇದೆಲ್ಲದರ ನಡುವೆ ಮೀಟರ್ ಹಾಕದೇ ಆಟೋ ಓಡಿಸಿದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಎಸ್‌ಪಿ ಮಿಥುನ್ ಕುಮಾರ್ ಈಗಾಗಲೇ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಇದರ ಜೊತೆಯಲ್ಲಿ ಇದೀಗ ಟ್ರಾಫಿಕ್ ಪೊಲೀಸ್ ವತಿಯಿಂದ ಆಟೋ ಮೀಟರ್ ದರಪಟ್ಟಿ ಬಿಡುಗಡೆ ಮಾಡಲಾಗಿದೆ. ಪ್ರತಿ ಕಿಲೋಮೀಟರ್‌ಗೆ ತಗುಲುವ ದರದ ವಿವರದ ಪಟ್ಟಿಯನ್ನು (auto meter price per km) ಟ್ರಾಫಿಕ್ ಪೊಲೀಸ್ ಇಲಾಖೆ ನೀಡಿದೆ.
ಆಟೋ ಮೀಟರ್ ದರ
ಕನಿಷ್ಠ ದರ (ಒಂದೂವರೆ ಕಿ.ಮೀ ಗೆ) ರೂ.40.00 (ಗರಿಷ್ಟ 3 ಜನ ಪ್ರಯಾಣಿಕರು)
ನಂತರದ ಪ್ರತಿ ಒಂದು ಕಿ.ಮೀ.ಗೆ ರೂ.20.00 (ಗರಿಷ್ಠ 3 ಜನ ಪ್ರಯಾಣಿಕರು)
ಕಾಯುವ ಬಗ್ಗೆ ವಿಧಿಸುವ ದರ ಮೊದಲ 15 ನಿಮಿಷದವರೆಗೆ ಉಚಿತ ನಂತರ 15 ನಿಮಿಷಗಳಿಗೆ ರೂ.5.00 ಹಾಗೂ ಭಾಗದಂತೆ
ಪ್ರಯಾಣಿಕರ ಲಗ್ಗೇಜ್‌ಗೆ ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಸರಕಿನ ಜೊತೆ ಇರಬೇಕು. ಮೊದಲ 20 ಕೆಜಿ ಲೆಗ್ಗೇಜ್‌ಗೆ ಉಚಿತ ಹಾಗೂ ನಂತರ ರೂ.5.00
ರಾತ್ರಿ 10.00 ಗಂಟೆಯಿಂದ ಬೆಳಿಗ್ಗಿನ ಜಾವ 5.00 ಗಂಟೆಯವರೆಗೆ ಮಾತ್ರ | ಈ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ. ಅಂದರೆ ರಾತ್ರಿ ಹತ್ತು ಗಂಟೆ ನಂತರ ಒನ್ ಆಂಡ್ ಹಾಫ್ ಪ್ರೈಸ್ ಪಡೆಯಬಹುದು
SUMMARY | auto meter price per km in shivamogga
KEY WORDS | auto meter price per km, auto meter price per km in shivamogga