SHIVAMOGGA | MALENADUTODAY NEWS | ಮಲೆನಾಡು ಟುಡೆ Dec 12, 2024
ಶಿವಮೊಗ್ಗ ಯಶವಂತಪುರ ಎಕ್ಸ್‌ಪ್ರೆಸ್ ಟ್ರೈನ್ ಚಿಕ್ಕಬಾಣಾವರದ ನಿಲುಗಡೆ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ರೈಲು ಸಂಖ್ಯೆ 16579/16580 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ಡೈಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಡಿಸೆಂಬರ್ 16 ರಿಂದ ಮಾರ್ಚ್ 15 ರವರೆಗೆ ಚಿಕ್ಕಬಾಣಾವರದಲ್ಲಿ ನಿಲುಗಡೆಯಾಗಲಿದೆ.
ರೈಲು ನಂಬರ್ 16579 ಯಶವಂತಪುರ-ಶಿವಮೊಗ್ಗ ಟೌನ್ ಡೈಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಚಿಕ್ಕಬಾಣಾವರಕ್ಕೆ ಬೆಳಗ್ಗೆ 9.25 ಕ್ಕೆ ಆಗಮಿಸಲಿದೆ ಹಾಗೂ 9.26 ಕ್ಕೆ ಹೊರಡಲಿದೆ. ಒಂದು ನಿಮಿಷದ ನಿಲುಗಡೆ ಒದಗಿಸಲಾಗಿದೆ.
ಇನ್ನೂ ರೈಲು ಸಂಖ್ಯೆ 16580 ಶಿವಮೊಗ್ಗ ಟೌನ್-ಯಶವಂತಪುರ ಡೈಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರಾತ್ರಿ 7.34 ಕ್ಕೆ ಆಗಮಿಸಿ 7.35 ಕ್ಕೆ ಹೊರಡಲಿದೆ.
ಇದೇ ರೀತಿಯಲ್ಲಿ ರೈಲು ಸಂಖ್ಯೆ 16519/16520 ಜೋಲಾರ್‌ಪೇಟ್ಟೈ-ಕೆಎಸ್‌ಆರ್ ಬೆಂಗಳೂರು-ಜೋಲಾರ್‌ಪೇಟ್ಟೈ MEMU ಟ್ರೈನ್ ಹೂಡಿಯಲ್ಲಿ ಒಂದು ನಿಮಿಷದ ನಿಲುಗಡೆಯಾಗಲಿದ್ದು, ಇದು ಮೇ 31, 2025 ರವರೆಗೆ ಮುಂದುವರಿಯುತ್ತದೆ.
SUMMARY | The Yeshwantpur-Shivamogga Town-Yeshwantpur Daily Intercity Express will stop at Chikkabanavara from December 16 to March 15.
KEY WORDS | Yeshwantpur-Shivamogga Town, Yeshwantpur Daily Intercity Express , Chikkabanavara