SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024
ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹರಿಹರಕ್ಕೆ ಹೊರಟಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನ ಕದ್ದಿರುವ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಾಗರ ತಾಲ್ಲೂಕುನಲ್ಲಿ ನಡೆದ ಮದುವೆಯೊಂದರಲ್ಲಿ ಪಾಲ್ಗೊಂಡ ಮಹಿಳೆಯೊಬ್ಬರು ಅಲ್ಲಿಂದ ಶಿವಮೊಗ್ಗಕ್ಕೆ ಖಾಸಗಿ ಬಸ್‌ನಲ್ಲಿ ವಾಪಸ್ ಆಗಿದ್ದಾರೆ. ಬಳಿಕ ಹರಿಹರದ ಮಲೆಬೆನ್ನೂರಿಗೆ ಹೋಗಲು KSRTC ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿ ರಶ್‌ನ ನಡುವೆ ಬಸ್ ಹತ್ತಿದ ಅವರಿಗೆ ತಮ್ಮ ವ್ಯಾನಿಟಿ ಬ್ಯಾಗ್‌ನ ಜಿಪ್ ಓಪನ್ ಆಗಿರುವುದು ಗಮನಕ್ಕೆ ಬಂದಿದೆ. ಬ್ಯಾಗ್ ಒಳಗೆ ಪರಿಶೀಲಿಸಿದಾಗ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಕಳುವಾಗಿರುವುದು ಗೊತ್ತಾಗಿದೆ. ಸದ್ಯ ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸ್ತಿದ್ದಾರೆ.
SUMMARY | case has been registered at Doddapete police station in connection with the theft of gold ornaments from the vanity bag of a woman who was on her way to Harihara from KSRTC bus stand in Shivamogga.
KEY WORDS | Doddapete police station, theft of gold ornaments from the vanity bag, Harihara from Shivamogga, KSRTC bus stand