ಶಿವಮೊಗ್ಗ ನಗರ ಪಾಲಿಕೆಯಲ್ಲಿನ ಈ ಸ್ವತ್ತು ಸಮಸ್ಯೆಗೆ ಪರಿಹಾರ ತಿಳಿಸಿದ ಶಾಸಕ SN ಚನ್ನಬಸಪ್ಪ

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024 ‌ 

ಶಿವಮೊಗ್ಗ ನಗರ ಪಾಲಿಕೆಯಲ್ಲಿ ಈ-ಆಸ್ತಿ ಗೊಂದಲ ಮುಂದುವರಿದಿದೆ. ಇದರ ನಡುವೆ ನಿನ್ನೆದಿನ ಸಚಿವ ಬೈರತಿ ಸಚಿವ ಮೂರು ನಾಲ್ಕು ವಾರದಲ್ಲಿ ಈ ಗೊಂದಲಗಳು ಪರಿಹಾರವಾಗಲಿದೆ ಎಂದಿದ್ದರು. 

ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಸ್ವೊತ್ತು ವಿಚಾರದಲ್ಲಿ ಶೀಘ್ರದಲ್ಲಿಯೇ ಈ-ಆಸ್ತಿ ದಾಖಲೀಕರಣ ಪೂರ್ಣ ಗೊಳಿಸಲಾಗುವುದು ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಸುಮಾರು ಒಂದು ಲಕ್ಷ ಏಳು ಸಾವಿರ ಖಾತೆದಾರರಿದ್ದಾರೆ. ಎಲ್ಲರ ಖಾತೆಗಳನ್ನು ಈ-ಆಸ್ತಿಗೆ ಒಳಪಡಿಸಲಾಗುವುದು.  ನಗರದಲ್ಲಿ ಮೂರು ಕಡೆ ಜಾಗಗಳನ್ನು ಗುರುತಿಸಲಾಗಿದ್ದು, ಅಲ್ಲಿ ಈ-ಆಸ್ತಿ ಕುರಿತಾಗಿಯೇ ಕಛೇರಿ ತೆರೆದು ದಾಖಲೆಗಳ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಕಾಲಮಿತಿಯೊಳಗೆ ಈಆಸ್ತಿ ವಿತರಿಸುವಂತೆ ಸೂಚಿಸಲಾಗಿದೆ ಎಂದ ಅವರು ಆರಂಭದಲ್ಲಿದ್ದ ಗೊಂದಲ ಈಗಿಲ್ಲ ಎಂದಿದ್ದಾರೆ.

SUMMARY |  Shivamogga MLA S N Channabasappa has clarified about the e-swathu form of Shivamogga City Corporation 

KEY WORDS  | Shivamogga MLA S N Channabasappa, e-swathu in Shivamogga City Corporation 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು