SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಲವರು ಕಾಣೆಯಾಗಿದ್ದರ ಸಂಬಂಧ ಪ್ರಕರಣ ದಾಖಲಾಗಿದೆ. ಅವರ ಸುಳಿವು ಇನ್ನೂ ಸಹ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಅಲ್ಲದೆ ಕಾಣೆಯಾದವರ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಪೊಲೀಸರಿಗೆ ಸುಳಿವು ನೀಡುವವಂತೆ ಕೋರಲಾಗಿದೆ. ಆ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ
ಸಂಖ್ಯೆ 1 | ಹೊಳಲೂರು ಗ್ರಾಮ ವಾಸಿ 66 ವರ್ಷದ ವಿರೂಪಾಕ್ಷಪ್ಪ ಬಿನ್ ಲೇ ರಂಗಪ್ಪ ಎಂಬುವವರು ಜೂ. 5ರಂದು ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಶರ್ಟ್, ನೀಲಿ ಪಂಚೆ ಮತ್ತು ಕೆಂಪು ಟವೆಲ್ ಧರಿಸಿರುತ್ತಾರೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ.
ಸಂಖ್ಯೆ 2 | ತೊಪ್ಪಿನಘಟ್ಟ, 1ನೇ ಕ್ರಾಸ್,ಹರಿಗೆ ವಾಸಿ 48 ವರ್ಷದ ಸತೀಶ್ ಡಿ ಬಿನ್ ಲೇ ದೇವರಾಜ್ ಎಂಬ ವ್ಯಕ್ತಿಯು ಸೆ.24ರಂದು ಮನೆಯಿಂದ ಕೆಲಸಕ್ಕೆ ಹೋದವರು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5.6 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಕಪ್ಪು ಕೂದಲು ಹೊಂದಿದ್ದು, ಮನೆಯಿಂದ ಹೋಗುವಾಗ ಕ್ರೀಮ್ ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಕಾಟನ್ ಶರ್ಟ್ ಧರಿಸಿರುತ್ತಾರೆ. ಕನ್ನಡ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ
ಸಂಖ್ಯೆ 3 | ಗೊಂದಿಚಟ್ನಹಳ್ಳಿ ಗ್ರಾಮ ವಾಸಿ 20 ವರ್ಷದ ಅಮೃತ ಟಿ ಬಿನ್ ಎಸ್ ತಿಪ್ಪೇಶಪ್ಪ ಎಂಬ ಮಹಿಳೆ ಆ.21ರಂದು ಮನೆಯಿಂದ ಸ್ನೇಹಿತೆಯ ಜೊತೆ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ಮಹಿಳೆ ಚಹರೆ 5.1ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದ, ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಮಿಶ್ರಿತ ಚೂಡಿದಾರ ಧರಿಸಿರುತ್ತಾರೆ. ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ.
ಸಂಖ್ಯೆ 4 | ರಾಗಿಗುಡ್ಡ 02ನೇ ಕ್ರಾಸ್, ವಾಸಿ 69 ವರ್ಷದ ದೇವೇಗೌಡ ಬಿನ್ ಲೇ ಚುಂಚೇಗೌಡ ಎಂಬುವವರು ಅ. 31 ರಂದು ರಾತ್ರಿ ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಸಂಖ್ಯೆ 5 | ಬಿಜಾಪುರ ತಾ.ಘಾಳಪೂಜಿ ಗ್ರಾಮ ವಾಸಿ 20 ವರ್ಷದ ಮೀನಾಕ್ಷಿ ಬಿನ್ ರಮೇಶ್ ಹಾರೆದೊಂಬರ ಎಂಬ ಯುವತಿ ನ. 07 ರಂದು ಶಿವಮೊಗ್ಗ ಕಲ್ಲಾಪುರದ ಸಾವಿತ್ರಮ್ಮ ಮನೆಯಿಂದ ಹೋದವರು ಈ ವರೆಗೂ ವಾಪಸ್ಸಾಗಿರುವುದಿಲ್ಲ. ಈ ಮಹಿಳೆ ಚಹರೆ 5ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಅರಿಶಿಣ ಬಣ್ಣದ ಚೂಡಿದಾರ, ಪ್ಯಾಂಟ್ ಮತ್ತು ಕಪ್ಪು ಬಣ್ಣದ ದುಪ್ಪಟ್ಟ ಧರಿಸಿರುತ್ತಾರೆ. ಕನ್ನಡ, ಹಿಂದಿ ಮತ್ತು ದೊಂಬರ ಭಾಷೆ ಮಾತನಾಡುತ್ತಾರೆ.
ಸಂಖ್ಯೆ 6 | ಚಿತ್ರದುರ್ಗ ಜಿಲ್ಲೆ, ಕಾಲ್ಕೆರೆ ಗ್ರಾಮ ವಾಸಿ ನಿಂಗರಾಜ ಕೆ.ಎಸ್ ಬಿನ್ ಲೇ ಶೇಖರಪ್ಪ ಎಂಬ 23 ವರ್ಷದ ಬುದ್ಧಿಮಾಂದ್ಯ ವ್ಯಕ್ತಿ ಅ.11 ರಂದು ಶಿವಮೊಗದ್ಗ ಚೀಲೂರು ಬಸ್ಸ್ ನಿಲ್ದಾಣದಿಂದ ಹೋದವರು ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿ ಚಹರೆ 5.6ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ನಡೆಯುವಾಗ ಎರಡೂ ಕಾಲು ತುದಿಯಲ್ಲಿ ಮಂಗಾಲಿನಲ್ಲಿ ನಡೆಯುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಬರ್ಮೂಡ ಚಡ್ಡಿ ಧರಿಸಿರುತ್ತಾರೆ. ಕನ್ನಡ ಬಾಷೆ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ.
ಕಾಣೆಯಾಗಿರುವ ಈ ವ್ಯಕ್ತಿಗಳ ಸುಳಿವು ದೊರೆಕಿದಲ್ಲಿ ಸಿಪಿಐ ಗ್ರಾಮಾಂತರ ವೃತ್ತ ಶಿವಮೊಗ್ಗ, ಪಿ.ಎಸ್.ಐ ಗ್ರಾಮಾಂತರ ಪೊಲೀಸ್ ಠಾಣೆ ದೂ. ಸಂ. 08182 261400, 261418, ಮೊ. ನಂ 9480803332, 9480803350 ಅಥವಾ ಕಂಟ್ರೋಲ್ ಶಿವಮೊಗ್ಗ 100 ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
SUMMARY| Four men and two women from Beejapur, Chitradurga, Ragigudda, Gondichatnalli and Thoppighatta have gone missing from Shivamogga Rural Police Station. An announcement has been made about them.
KEY WORDS | Four men and two women missing ,Beejapur, Chitradurga, Ragigudda, Gondichatnalli and Thoppighatta, Shivamogga Rural Police Station,