SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 28, 2025
ಬೆಂಗಳೂರು | ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದ್ದು, ಶಿವಮೊಗ್ಗದ ಮೂವರು ಪತ್ರಕರ್ತರು ಸೇರಿದಂತೆ ಒಟ್ಟು 23 ಪತ್ರಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು, ಶಿವಮೊಗ್ಗದ ಪತ್ರಕರ್ತರಾದ ಗಿರೀಶ್ ಉಮ್ರಾಯಿ ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ, ಶೃಂಗೇರಿಯ ಚಂದ್ರು ಶೇಖರ್ ಮಿಂಚು ಶ್ರೀನಿವಾಸ ಪ್ರಶಸ್ತಿ, ಹಾಗೂ ಕವಿತಾರವರು ಗಿರಿಜಮ್ಮ ರುದ್ರಪ್ಪ ತಾಳಿಕೋಟಿ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ಹಾಗೆಯೇ ಅಂದು ಕರ್ನಾಟಕ ಕಾರ್ಯ ನಿರತಪತ್ರಕರ್ತರ ವಿಶೇಷ ಪ್ರಶಸ್ತಿಯನ್ನೂ ಸಹ ನೀಡುತ್ತಿದ್ದು, ಟಿವಿ9 ಕನ್ನಡದ ರಂಗನಾಥ್ ಎಸ್ ಭಾರದ್ವಾಜ್, ಟಿವಿ 5 ಕನ್ನಡದ ರಮಾಕಾಂತ್ , ಶ್ರೀನಿವಾಸ್ ಬೆಂಗಳೂರು, ಬಿ.ಪಿಳ್ಳರಾಜು ಬೆಂಗಳೂರು ಗ್ರಾಮಾಂತರ, ಬಾಸ್ಕರ ರೈ ಕಟ್ಟ ಮಂಗಳೂರು, ಗುರುಶಾಂತ.ಎನ್ ಬಳ್ಳಾರಿ, ಎಸ್.ಎಂ.ಮನೋಹರ ಹೊಸಪೇಟೆ, ಸಿ.ಬಿ.ಸುಬೇದಾರ್ ನರಗುಂದ ಇವರುಗಳು ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.
SUMMARY | The KUWJ Endowment Awards, instituted by the Karnataka Working Journalists Association, have been announced
KEYWORDS | KUWJ Endowment Awards, Journalists, shivamogga,