SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024
ಶಿವಮೊಗ್ಗಕ್ಕೆ ನಿನ್ನೆ ದಿನ ಬಂದಿದ್ದ ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ರವರಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಬೇರೆ ಹೋಟೆಲ್‌ನ ಊಟ ಕೊಟ್ಟಿದ್ದರು ಎಂಬ ವಿಚಾರ ಇದೀಗ ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ವಿವಿಧ ಕಾರ್ಯಕ್ರಮಗಳ ಟಿಪಿಯಂತೆ ಶಿವಮೊಗ್ಗಕ್ಕೆ ಬಂದಿದ್ದ ಸಚಿವ ರಹೀಂಖಾನ್‌ರವರು ನಿನ್ನೆ ಇಂದಿರಾ ಕ್ಯಾಂಟೀನ್‌ಗೆ ಭೇಟಿಕೊಟ್ಟಿದ್ದರು. ಬಿಹೆಚ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಸಚಿವರು ಭೇಟಿಕೊಟ್ಟಾಗ, ಅವರ ಜೊತೆಗಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹ ಇಂದಿರಾ ಕ್ಯಾಂಟೀನ್‌ನಲ್ಲಿಯೇ ಊಟ ಮಾಡಿದ್ದರು.
ಈ ನಡುವೆ ಅಲ್ಲಿ ಊಟಕ್ಕಿದ್ದ ಮೆನುವನ್ನ ನೋಡಿದ ಸಿಬ್ಬಂದಿ ಹಾಗೂ ಸೇರಿದ್ದ ಜನರು ಊಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇವರಿಗಾದರೇ ಬೇರೆ ಕಡೆಯಿಂದ ಊಟ ತರುತ್ತಾರೆ, ಜನಕ್ಕಾದರೆ ತಿನ್ನೋಕಾಗದ ಊಟ ಕೊಡುತ್ತಾರೆ ಎಂಬ ಟೀಕೆಗಳು ಸ್ಥಳದಲ್ಲಿಯೇ ಕೇಳಿಬಂದಿದ್ದವು. ಇದರ ಬೆನ್ನಲ್ಲೆ ಊಟ ಮೆನು ಹಾಗೂ ಊಟಕ್ಕೆ ಬಳಸಿದ ರೈಸ್ ಕ್ವಾಲಿಟಿ ಸಚಿವರಿಗೂ ಅನುಮಾನ ಮೂಡಿಸಿದೆ. ಇದರ ಜೊತೆಯಲ್ಲಿ ಮಾಧ್ಯಮಗಳು ಇಂದಿರಾ ಕ್ಯಾಂಟೀನ್‌ನ ಊಟದ ಬಗ್ಗೆ ತನಿಖೆಗೆ ಇಳಿದಿದು , ಸಚಿವರನ್ನ ಯಾಮಾರಿಸಲು ಇಂದಿರಾ ಕ್ಯಾಂಟೀನ್‌ನಲ್ಲಿ ಬೇರೆ ಹೋಟೆಲ್‌ನಿಂದ ಊಟ ಪಾರ್ಸಲ್ ತಂದು ಅವರಿಗೆ ಬಡಿಸಿದ್ದಾರೆ ಎಂದು ವರದಿ ಮಾಡಿತ್ತು.
ಈ ಬಗ್ಗೆ ಮಾತನಾಡಿದ ಸಚಿವ ರಹೀಂ ಖಾನ್, ಊಟದ ವಿಚಾರದಲ್ಲಿ ತಮಗೂ ಅನುಮಾನ ಬಂದಿತ್ತು. ಈ ಬಗ್ಗೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ. ಆದರು ಇಂದಿರಾ ಕ್ಯಾಂಟೀನ್‌ನಲ್ಲಿ ಈ ರೀತಿ ಆದರೆ ಬೇರೆಯದ್ದೆ ತಪ್ಪು ಸಂದೇಶ ಹೋಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
SUMMARY | Municipal Administration and Haj Minister Rahim Khan was served food from another hotel at Indira Canteen by officials.
KEY WORDS | Municipal Administration and Haj Minister Rahim Khan was served food from another hotel , Indira Canteen