SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಯಾಣಿಸಿ ಮೊದಲ ಸಲ ವಿಮಾನದಲ್ಲಿ ಪ್ರಯಾಣಿಸಿದ ಅನುಭವ ಪಡೆದಿದ್ದಾರೆ ಇತ್ತೀಚೆಗೆ ವಿಮಾನ ನಿಲ್ದಾಣ ಸೇವೆಗಳು ಸ್ಥಳೀಯವಾಗಿ ಲಭ್ಯವಾಗುತ್ತಿರುವ ಪರಿಣಾಮ, ಅದರ ಉಪಯೋಗ ಪಡೆದುಕೊಂಡು ಸರ್ಕಾರಿ ಶಾಲೆಯ ಮಕ್ಕಳನ್ನ ವಿಮಾನದಲ್ಲಿ ಪ್ರವಾಸ ಕರೆದುಕೊಂಡು ಹೋಗುವ ಪ್ರಯೋಗಕ್ಕೆ ಶಿಕ್ಷಕರು ಮುಂದಾಗುತ್ತಿದ್ದಾರೆ.
ಈ ನಿಟ್ಟಿನಲ್ಲಿ ಹರಿಹರ ತಾಲ್ಲೂಕಿನ ತಾಲೂಕಿನ ಕಡರ ನಾಯ್ಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ಅಲ್ಲಿನ ಶಿಕ್ಷಕರು ಇಂತಹದ್ದೊಂದು ಪ್ರಯತ್ನವನ್ನು ಮಕ್ಕಳ ಪೋಷಕರ ಜೊತೆಗೂಡಿ ಯಶಸ್ವಿಗೊಳಿಸಿದ್ದಾರೆ. ಹೀಗೊಂದು ಪ್ರವಾಸವನ್ನ ಕೈಗೊಳ್ಳುವ ಬಗ್ಗೆ ಮಕ್ಕಳ ಮೂಲಕ ಪೋಷಕರನ್ನ ಕೇಳಿದಾಗ, ನಾವಂತು ಪ್ಲೈಟ್ನಲ್ಲಿ ಹೋಗೋಕಾಗಲ್ಲ. ನೀವು ಹೋಗ್ರಪ್ಪ ಅಂತಾ ತಮ್ಮ ಮಕ್ಕಳಿಗೆ ಅನುಮತಿ ನೀಢಿದ್ದಾರೆ. ಆನಂತರ ತಲಾ ಐದು ಸಾವಿರ ರೂಪಾಯಿಯಂತೆ ಪೋಷಕರಿಂದ ಹಣ ಪಡೆದುಒಟ್ಟು 26 ವಿದ್ಯಾರ್ಥಿಗಳನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಮಕ್ಕಳ ಈ ಪ್ರವಾಸ ವಿಶೇಷವಾಗಿ ಯಶಸ್ವಿಯಾಗಿದ್ದು, ಪೋಷಕರು ಹಾಗೂ ಮಕ್ಕಳು ಮತ್ತು ಶಿಕ್ಷಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
SUMMARY | Children from Harihara Government School travelled by plane from Shivamogga airport to Bengaluru

KEY WORDS | Children from Harihara Government School, from Shivamogga airport ,Bengaluru