ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಡಿಯೋ ಗಾಡಿಯಲ್ಲಿ ಗಾಂಜಾ ಸಾಗಿಸ್ತಿದ್ದ ಗಂಡ ಹೆಂಡತಿ ಅರೆಸ್ಟ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 30, 2025 ‌‌ 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಾಂಜಾ ಮಾರುತ್ತಿದ್ದ ಗಂಡ ಹೆಂಡತಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಅಲ್ಲದೆ 2 ಲಕ್ಷ ಮೌಲ್ಯದ ಗಾಂಜಾ ಸೀಜ್‌ ಮಾಡಿದ್ದಾರೆ. ವಿಶೇಷ ಅಂದರೆ ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಗಾಂಜಾ ತರುವಾಗಲೇ ಈ ದಂಪತಿ ಸೀಜ್‌ ಆಗಿದ್ದಾರೆ. ಡಿಯೋ ಬೈಕ್‌ನಲ್ಲಿ 10 ಕೆಜಿ ಗಾಂಜಾ ತುಂಬಿಕೊಂಡು ಬರುತ್ತಿದ್ದ ದಂಪತಿ, ಚಿಕ್ಕಮಗಳೂರು ಮಾರ್ಕೆಟ್‌ ರಸ್ತೆ ಬಳಿ ಅದನ್ನು ಪ್ರತಿಸಲ ಮಾರುತ್ತಿದ್ದರಂತೆ. 

ಈ ಬಗ್ಗೆ ಸಿಇಎನ್‌ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ, ವಿಷಯ ತಿಳಿದು ಪೊಲೀಸರು ರೇಡ್‌ ನಡೆಸಿದ್ದಾರೆ. ದಾಳಿ ವೇಳೆ ದಂಪತಿ ಇದ್ದ ಬೈಕ್‌ನಲ್ಲಿ 10 ಕೆಜಿ ಗಾಂಜಾ ಸಿಕ್ಕಿದೆ. ಎಲ್ಲವನ್ನು ಸೀಜ್‌ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಅರೆಸ್ಟ್‌ ಮಾಡಿದ್ದಾರೆ.

 

SUMMARY  | Couple arrested for transporting ganja from Shimoga to Chikkamagaluru

KEY WORDS | Couple arrest , transporting ganja from Shimoga to Chikkamagaluru

Share This Article