SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024
ಶಿವಮೊಗ್ಗದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಕ್ತಿಯೊಬ್ಬರು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ 41 ಲಕ್ಷ ರೂಪಾಯಿ ಕಳೆದುಕೊಂಡಿದ್ದರ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಇದೀಗ ಈ ಪ್ರಕರಣವನ್ನ ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆ.
ಸಾಮಾನ್ಯವಾಗಿ ಸೈಬರ್ ಕ್ರೈಂ ವಿಚಾರದಲ್ಲಿ ಆರೋಪಿಗಳು ಸಿಗೋದು ಕಷ್ಟಸಾಧ್ಯ ಅಂತದ್ರಲ್ಲಿ ಡಿಜಿಟಲ್ ಅರೆಸ್ಟ್ ವಿಚಾರದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಆತಂಕ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಎಚ್ಚರವಹಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇದರ ನಡುವೆ ಶಿವಮೊಗ್ಗ ಪೊಲೀಸ್ ಇಲಾಖೆ ತೀರಾ ಕ್ಲಿಷ್ಟಸಾದ್ಯವಾಗಿದ್ದ ಕೇಸ್‌ನಲ್ಲಿ ಆರೋಪಿಗಳಿಬ್ಬರನ್ನ ಅರೆಸ್ಟ್ ಮಾಡಿ ಶಿವಮೊಗ್ಗಕ್ಕೆ ಕರೆತಂದಿದೆ.
ಅಂದಿನ ವರದಿ ಪೂರ್ಣ ವಿವರ ಇಲ್ಲಿದೆ ಓದಿ ಶಿವಮೊಗ್ಗ ಸಿಟಿಗೂ ಬಂತು ಮುಂಬೈ ಪೊಲೀಸ್ FAKE ಕರೆ | PHONE ನಲ್ಲೆ 41 ಲಕ್ಷ ಸುಲಿಗೆ | ನಿಮ್ಮ ದುಡ್ಡು ಜಾಗ್ರತೆ
ಶಿವಮೊಗ್ಗದ ಗೋಪಾಳದಲ್ಲಿ ವಾಸವಿದ್ದ 72 ವರುಷದ ವ್ಯಕ್ತಿಯೊಬ್ಬರಿಗೆ ಸಿ.ಬಿ.ಐ ಅಧಿಕಾರಿ ಎಂದು ಹೇಳಿಕೊಂಡು ವಿಡಿಯೋ ಕಾಲ್ ಮಾಡಿದ್ದ ವ್ಯಕ್ತಿಯೊಬ್ಬರು ನಿಮ್ಮ ಆದಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣವು ಅಕ್ರಮವಾಗಿ ವರ್ಗಾವಣೆಯಾಗಿದ್ದರಿಂದ ನಿಮ್ಮ ಮೇಲೆ ದೂರು ದಾಖಲಾಗಿದೆ. ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿಯಾಗಿದೆ. ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಇದರಿಂದ ಸೇಫ್ ಆಗಬೇಕಾದರೆ, ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ಹೆದರಿಸಿದ್ದರು.
ಈ ಸಂಬಂಧ ಒಟ್ಟು 41 ಲಕ್ಷ ರೂ ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಆರೋಪದ ಅಡಿಯಲ್ಲಿ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ 66(ಡಿ) ಐಟಿ ಆಕ್ಟ್ & 111,318(4), 319(2) ಬಿ.ಎನ್.ಎಸ್ ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಈ ಪ್ರಕರಣದ ಸಂಬಂಧ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ವಿಶೇಷ ಟೀಂ ರಚನೆ ಮಾಡಿದ್ದರು. ಕೃಷ್ಣಮೂರ್ತಿ ಕೆ ಡಿ.ವೈ.ಎಸ್ಪಿ. ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ ಮೇಲ್ವಿಚಾರಣೆಯಲ್ಲಿ, ಮಂಜುನಾಥ ಪಿ.ಐ ರವರ ನೇತೃತ್ವದ ಶೇಖರ ಎ.ಎಸ್.ಐ ಮತ್ತು ಸಿಬ್ಬಂದಿಗಳಾದ ಆರ್ ವಿಜಯ್ ಹೆಚ್.ಸಿ, ರವಿ ಬಿ ಸಿಪಿಸಿ ಮತ್ತು ಶರತ್ ಕುಮಾರ್ ಬಿ.ಎಸ್ ಸಿಪಿಸಿ ಯವರ ತಂಡ ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ.
ಆರೋಪಿಗಳು
1) ಮೊಹಮ್ಮದ್ ಅಹಮದ್, 45 ವರ್ಷ, ವಲಿದಪುರ ನಗರ, ಜಿ.ಎನ್ ಪುರ ಮಾರ್ಗ, ಮೌನಾತ್ ಬಂಜನ್ ಜಿಲ್ಲೆ, ಉತ್ತರ ಪ್ರದೇಶ ಮತ್ತು 2) ಅಭಿಶೇಕ್ ಕುಮಾರ್ ಶೇಟ್, 27 ವರ್ಷ, ಮೊಹುಡಿಯಾ ಗ್ರಾಮ, ಅಜಂಗಡ ಜಿಲ್ಲೆ, ಉತ್ತರ ಪ್ರದೇಶ
ಇವರನ್ನು ದಸ್ತಗಿರಿ ಮಾಡಿರುವ ಪೊಲೀಸರು ಒಟ್ಟು 23,89,751/- ರೂ ಹಣವನ್ನುಅಮಾನತ್ತುಪಡಿಸಿಕೊಂಡಿದ್ದಾರೆ.
ಇವರಿಬ್ಬರನ್ನ ಶಿವಮೊಗ್ಗ ಪೊಲೀಸರು ವಾರಣಸಿಯಲ್ಲಿ ಬಂಧಿಸಿ ಶಿವಮೊಗ್ಗಕ್ಕೆ ಕರೆತಂದಿದ್ದಾರೆ. ಇನ್ನೂ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ಮೊದಲ ಡಿಜಿಟಲ್ ಅರೆಸ್ಟ್ ಪ್ರಕರಣ ಇದಾಗಿತ್ತು. ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಕೇಸ್‌ನ್ನ ಬಿಡಿಸುವಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ಆತ ಮೊಹಮ್ಮದ್ ಅಹಮದ್‌ನ ಪುತ್ರ ಶಾಕೀರ್ ಅಲಿ (24) . ಈತನನ್ನ ಹಿಡಿಯಲು ಶಿವಮೊಗ್ಗ ಪೊಲೀಸರು ಇಂಟರ್ ಪೋಲ್ ಮೊರೆಹೋಗಿದ್ದಾರೆ.
SUMMARY| Shimoga police have cracked the first digital arrest case registered in Shivamogga and arrested two persons from Varanasi in Uttar Pradesh.
KEY WORDS | Shimoga police have cracked the first digital arrest case , Shivamogga , arrested two persons from Varanasi in Uttar Pradesh. Malnad Today