SHIVAMOGGA | MALENADUTODAY NEWS | ಮಲೆನಾಡು ಟುಡೆ Dec 24, 2024
ಶಿವಮೊಗ್ಗ ನಗರದಲ್ಲಿ ಟೀಂ ಇಂಡಿಯಾದ ಸ್ಫೋಟಕ ಆಟಗಾರನಾಗಿದ್ದ ವಿರೇಂದ್ರ ಸೇಹ್ವಾಗ್‌ರವರ ಪುತ್ರ ವೇದಾಂತ್ ತನ್ನದೆ ಆದ ಸಾದನೆ ಮೆರೆದಿದ್ದಾನೆ. ಶಿವಮೊಗ್ಗದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಮಾರಕ ಬೌಲಿಂಗ್ ನಡೆಸಿರುವ ವೇದಾಂತ್ ಸೇಹ್ವಾಗ್ ಮೊದಲ ಇನ್ನಿಂಗ್ಸ್‌ನಲ್ಲಿ ದೆಹಲಿ ಪರವಾಗಿ ಐದು ವಿಕೆಟ್ ಪಡೆದುಕೊಂಡಿದ್ದಾರೆ. ಅಲ್ಲದೆ ಸೆಕೆಂಡ್ ಇನ್ಸಿಂಗ್‌ನಲ್ಲಿ ಈಗಾಗಲೇ ಒಂದು ವಿಕೆಟ್ ಉರುಳಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್ ವಿಜಯ್ ಮರ್ಚೆಂಟ್ ಟ್ರೋಪಿ (ಅಂಡರ್ 16) ಟೂರ್ನಿಯ ಅಂಗವಾಗಿ ಶಿವಮೊಗ್ಗದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಸೌರಾಷ್ಟ್ರ ಎದುರು ದೆಹಲಿ ಪರ 5 ವಿಕೆಟ್ ಗೊಂಚಲು ಪಡೆದಿದ್ದಾರೆ.
ಆಫ್ ಸ್ಪಿನ್ನರ್ ಆಗಿರುವ 14 ವರ್ಷದ ವೇದಾಂತ್, 20.1 ಓವರ್‌ಗಳಲ್ಲಿ 9 ಮೇಡನ್ ಸಹಿತ 37 ರನ್ ನೀಡಿ 5 ವಿಕೆಟ್ ಕಬಳಿಸಿದರು. ಇದರಿಂದ ದೆಹಲಿಯ 234 ರನ್‌ಗಳಿಗೆ ಪ್ರತಿಯಾಗಿ ಸೌರಾಷ್ಟ್ರ 163 ರನ್‌ಗಳಿಗೆ ಆಲೌಟ್ ಆಗಿ ಇನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟಿತು. ದೆಹಲಿ 2ನೇ ಇನ್ಸಿಂಗ್‌ನಲ್ಲಿ 161 ಕ್ಕೆ ಆಲೌಟ್ ಆಗಿದೆ. ಸೌರಾಷ್ಟ್ರಕ್ಕೆ 299 ರನ್‌ಗಳ ಗುರಿ ನೀಡಲಾಗಿದೆ. ಇದರ ನಡುವೆ ವೇದಾಂತ್ ಸೌರಾಷ್ಟ್ರದ ಎರಡನೇ ಇನ್ಸಿಂಗ್‌ನಲ್ಲಿಯು ಮೊದಲ ವಿಕೆಟ್ ಉರುಳಿಸಿದ್ದಾರೆ.
SUMMARY | Virender Sehwag’s son Vedant Sehwag took five wickets in the Vijay Merchant Trophy Under-16 tournament being held at the KSCA ground in Shivamogga.
KEY WORDS | Virender Sehwags son Vedant Sehwag took five wickets , Vijay Merchant Trophy Under-16 tournament ,KSCA ground in Shivamogga.