SHIVAMOGGA | MALENADUTODAY NEWS | ಮಲೆನಾಡು ಟುಡೆ Dec 27, 2024
ಬಾಡಿಗೆಗೆ ಕೇಳಿ ಆಟೋವನ್ನ ಪ್ರಯಾಣಿಕನೊಬ್ಬ ಕದ್ದೊಯ್ದ ಪ್ರಕರಣ ತುಸು ತಡವಾಗಿ ವರದಿಯಾಗಿದೆ. ಲಭ್ಯ ಮಾಹಿತಿ ಪ್ರಕಾರ, ನಡೆದ ಘಟನೆ ಹಿನ್ನೆಲೆ ಹೀಗಿದೆ. ಶಿವಮೊಗ್ಗದಲ್ಲಿ ಹಣ್ಣು ಖರೀದಿಸುವ ನೆಪದಲ್ಲಿ ಆಟೊ ಹತ್ತಿದ್ದ ವ್ಯಕ್ತಿಯೊಬ್ಬ ಅದೇ ಆಟೊದೊಂದಿಗೆ ಪರಾರಿಯಾಗಿದ್ದ. ಆತನ ಬೆನ್ನುಬಿದ್ದ ಶಿವಮೊಗ್ಗ ಪೊಲೀಸರು ಚಿತ್ರದುರ್ಗ ಜಿಲ್ಲೆ ಚಿಕ್ಕಜಾಜೂರು ಸಮೀಪ ಅಲ್ಲಿನ ಪೊಲೀಸರ ಮೂಲಕ್ಕೆ ವಶಕ್ಕೆ ಪಡೆದಿದ್ದಾರೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದು, ಆತನನ್ನ ಮೈಸೂರಿನ ಹೆಬ್ಬಾಳದ ನಿವಾಸಿ ಮಹೇಶ ಎಂದು ಗುರುತಿಸಲಾಗಿದೆ.
ಪವಿತ್ರ ಸ್ಥಳದ ಹಣಗೆರೆಕಟ್ಟೆಗೆ ಹೋಗಿ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿದ್ದ ಈತ ಅಲ್ಲಿ ಆಟೋ ಬಾಡಿಗೆಗೆ ಪಡೆದು ಗೋಪಾಳ ಬಸ್ ಸ್ಟಾಪ್‌ಗೆ ತೆರಳಿದ್ದಾನೆ. ಅಲ್ಲಿ ಹಣ್ಣು ಖರೀದಿಸುವ ನಾಟಕವಾಡಿದ್ದಾನೆ. ಆ ಬಳಿಕ ಹಣ್ಣು ತೂಕ ಎಷ್ಟಿದೆ ನೋಡಿ ಅಂತಾ ಆಟೋ ಚಾಲಕರಿಗೆ ತಿಳಿಸಿದ್ದಾರೆ. ಪ್ರಯಾಣಿಕ ಹೇಳಿದಂತೆ ಆಟೋ ಚಾಲಕ ಹಣ್ಣಿನ ತೂಕ ನೋಡಲು ಮುಂದಾಗಿದ್ದಾನೆ. ಅಷ್ಟರಲ್ಲಿ ಆಟೋ ಚಾಲನೆ ಮಾಡಿಕೊಂಡು ಮಹೇಶ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಆ ಬಳಿಕ ಕಾರ್ಯಾಚರಣೆಗೆ ಇಳಿದ ತುಂಗಾನಗರ ಪೊಲೀಸರು ಮಹೇಶ್‌ನ್ನ ಚಿಕ್ಕಜಾಜೂರು ಬಳಿ ವಶಕ್ಕೆ ಪಡೆದಿದ್ದಾರೆ.
SUMMARY | man who was fleeing with an auto rickshaw near Chikka Jajur in Chitradurga has been arrested by the Tunganagar police station.
KEY WORDS | man fleeing with an auto rickshaw arrested, ChikkaJajur ,Chitradurga Tunganagar police station.