SHIVAMOGGA | MALENADUTODAY NEWS | ಮಲೆನಾಡು ಟುಡೆ Nov 17, 2024
ಶಿವಮೊಗ್ಗದಲ್ಲಿ ರಂಗಾಯಣದ ವತಿಯಿಂದ ಇವತ್ತಿನಿಂದ ಕಾಲೇಜು ರಂಗೋತ್ಸವ ನಡೆಯಲಿದೆ. ಶಿವಮೊಗ್ಗ ರಂಗಾಯಣವು ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ಈ ರಂಗೋತ್ಸವ ಆಯೋಚಿಸುತ್ತಿದೆ. ಇದೇ ನವೆಂಬರ್ 17ರಿಂದ 19ರವರೆಗೆ ‘ಕಾಲೇಜು ರಂಗೋತ್ಸವ 2024-25’ ಮತ್ತು ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಶಿಕ್ಷಣದಲ್ಲಿ ರಂಗಕಲೆ ಕಮ್ಮಟ ಆಯೋಜಿಸಲಾಗಿದೆ.
ಮೊದಲ ಹಂತದಲ್ಲಿ ಶಿವಮೊಗ್ಗ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಮೂರು ಕಾಲೇಜು ತಂಡಗಳಿಂದ ಪ್ರತಿದಿನ ಮಧ್ಯಾಹ್ನ 3 ಮತ್ತು ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
SUMMARY| From November 17 to 19 College Rangotsava 2024-25 and a theater workshop in education for B.Ed trainees will be organized.
KEY WORDS | College Rangotsava 2024-25, theater workshop trainees , rangayana