ಶಿವಮೊಗ್ಗದಲ್ಲಿ ಅಪ್ಪು ಹುಟ್ಟುಹಬ್ಬ, ಅದ್ದೂರಿಯಾಗಿ ಆಚರಿಸಿದ ಫ್ಯಾನ್ಸ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 17, 2025

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ರವರ 50 ನೇ ವರ್ಷದ ಹುಟ್ಟು ಹಬ್ಬವನ್ನು ಶಿವಮೊಗ್ಗದಲ್ಲಿ ಅಪ್ಪು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು.

- Advertisement -

ಒಂದೆಡೆ ಯುವನಾಯಕ ಕೆ ಈ ಕಾಂತೇಶ್‌ ಕೇಕ್‌ ಕತ್ತರಿಸಿ ಅಪ್ಪು ಬರ್ತಡೆಯನ್ನು ಆಚರಿಸಿದರೆ. ಇನ್ನೊಂದೆಡೆ ಶಿವಮೊಗ್ಗಕ್ಕೆ ಸಿನಿಮಾ ಪ್ರಚಾರಕ್ಕೆಂದು ಆಗಮಿಸಿದ್ದ ಮನದ ಕಡಲು ಚಿತ್ರತಂಡ ಸಹ ಗ್ಯ್ರಾಂಡ್‌ ಆಗಿ ಆಚರಿಸಿತು. ಈ ಸಂದರ್ಭದಲ್ಲಿ ಮನದ ಕಡಲು ಚಿತ್ರದ ನಾಯಕ ನಟ ಸುಮುಕ ಹಾಗೂ ನಟಿ ನಿಶಿಕಾ ಶೆಟ್ಟಿ ಅಭಿಮಾನಿಗಳಿಗೆ ಬಿರಿಯಾನಿಯನ್ನು ವಿತರಿಸಿದರು. 

ಅಷ್ಟೇ ಅಲ್ಲದೆ ಅಪ್ಪು ಅಭಿಮಾನಿಗಳು  ಶಿವಮೊಗ್ಗದ ಗೋಪಿ ವೃತ್ತದಲ್ಲಿಅಲ್ಲಿ ನೆರೆದಿದ್ದವರಿಗೆ ಬಿರಿಯಾನಿ ಬೀಡಾವನ್ನು ಹಂಚಿದರು. ಈ ವೇಳೆ ನೂರಾರು ಜನ ಅಪ್ಪು ಅಭಿಮಾನಿಗಳು ಭಾಗವಹಿಸಿದ್ದು, ಅಪ್ಪು, ಅಪ್ಪು, ಅಪ್ಪು ಎಂದು ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು.

SUMMARY | Power Star Puneeth Rajkumar’s 50th birthday was celebrated in Shivamogga by Appu fans.

KEYWORDS |  Power Star, Puneeth Rajkumar, 50th birthday, Shivamogga, 

Share This Article
Leave a Comment

Leave a Reply

Your email address will not be published. Required fields are marked *