SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 5, 2024
ಶಿವಮೊಗ್ಗ | ಅಕ್ಷತಾ ಪಾಂಡವಪುರ ಅಭಿನಯದ ಲೀಕ್ ಔಟ್ ನಾಟಕವು ಇದೇ ಡಿಸೆಂಬರ್ 7ರಂದು ಸಂಜೆ 6:30 ಕ್ಕೆ ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಈ ಕುರಿತು ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲೀಕ್ ಔಟ್ ನಾಟಕವು ಇದುವರೆಗೂ ರಾಜ್ಯಾದ್ಯಂತ 99 ಪ್ರದರ್ಶನವನ್ನು ಕಂಡಿದೆ. ಈಗ ನಡೆಯಲಿರುವ 100 ನೇ ನಾಟಕ ಪ್ರದರ್ಶನವನ್ನು ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ನಡೆಸುತ್ತಿದ್ದೇವೆ ಎಂದರು.

ಹಾಗೆಯೇ ಅಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ನಗರದ ಪತ್ರಿಕಾ ಭವನದಲ್ಲಿ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ ಆ ಕಾರ್ಯಕ್ರಮದಲ್ಲಿ ಇದುವರೆಗೂ ರಾಜ್ಯಾದ್ಯಂತ ಲೀಕ್ ಔಟ್ ನಾಟಕವನ್ನು ಆಯೋಜನೆ ಮಾಡಿರುವ ಆಯೋಜಕರಿಗೆ ಸನ್ಮಾನ ಕಾರ್ಯಕ್ರಮ. ಹಾಗೆಯೇ ಇದುವರೆಗೂ ನಡೆದಿರುವ ನಾಟಕದ 20 ನಿಮಿಷದ ಡಾಕ್ಯುಮೆಂಟರಿ ಬಿಡುಗಡೆ ಸೇರಿದಂತೆ ಕೆಲವು ಕಾರ್ಯಕ್ರಮವನ್ನು ನಡೆಸುತ್ತೇವೆ. ಈ ಡಾಕ್ಯುಮೆಂಟರಿಯನ್ನು ಚಿತ್ರಸಾಹಿತಿ ಕವಿರಾಜ್ ಬಿಡುಗಡೆ ಮಾಡಲಿದ್ದಾರೆ ಎಂದರು.
ಈ ಕಾರ್ಯಕ್ರಮದ ನಂತರ ಸಂಜೆ 6:30 ರಿಂದ ಲೀಕ್ ಔಟ್ ನಾಟಕ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ರಂಗ ನಿರ್ದೇಶಕ ಚಿದಂಬರ್ ರಾಬ್ ಜಂಬೆ ಅವರು ಚಾಲನೆ ನೀಡಲಿದ್ದಾರೆ. ಈ ನಾಟಕದ ವಿಶೇಷತೆ ಎಂದರೆ ಇಲ್ಲಿ ಅಕ್ಷತಾ ಪಾಂಡವಪುರ ಏಕವ್ಯಕ್ತಿ ಅಭಿನಯವನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿ ನೆರೆದಿರುವ ಪ್ರೇಕ್ಷಕರೇ ಪಾತ್ರಧಾರಿಗಳಾಗಿರುತ್ತಾರೆ ಹಾಗೆಯೇ ಈ ನಾಟಕಕ್ಕೆ ಉಚಿತ ಪ್ರವೇಶವಿರುತ್ತದೆ ಎಂದರು.
SUMMARY| Akshata Pandupura starrer leakout drama will be staged on 7th December at 6.30 pm at Government Employees’ Bhavan in Shivamogga. Honnali Chandrasekhar, general secretary of the artistes’ union, said
KEYWORDS| Akshata Pandupura, leakout drama, Shivamogga,