ಶಿವಮೊಗ್ಗದಲ್ಲಿಯು ಹೀಗೆ ನಡೆಯುತ್ತಾ? ಜಸ್ಟ್‌ 30 ಸೆಕೆಂಡ್‌ನಲ್ಲಿ ಕಾರಲ್ಲಿ ಏನಾಯ್ತು ಗೊತ್ತಾ?!

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 26, 2025 ‌‌ 

ಶಿವಮೊಗ್ಗ ನಗರದಲ್ಲಿ ಕಾರು ಗ್ಲಾಸ್‌ ಒಡೆದು ಅದರೊಳಗಿರುವ ದುಡ್ಡು ಕದಿಯು ಪ್ರಕರಣವೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗ ಸಿಟಿಯ ಪ್ರತಿಷ್ಟಿತ ಆಸ್ಪತ್ರೆಗಳ ಬಳಿಯಲ್ಲಿ ಇಂತಹದ್ದೊಂದು ಘಟನೆ ನಡೆಯುತ್ತಿದೆ ಎನ್ನಲಾಗಿದ್ದು, ವ್ಯವಸ್ಥಿತ ಟೀಂವೊಂದು ಇಂತಹ ಕೃತ್ಯವೆಸಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. 

ಸದ್ಯ ಮಾಧ್ಯಮಗಳಿಗೆ ಸಿಕ್ಕಿರುವ ಸಿಸಿ ಕ್ಯಾಮರಾದಲ್ಲಿ ಪ್ರತಿಷ್ಟಿತ ಆಸ್ಪತ್ರೆಯೊಂದರ ಬಳಿಯಲ್ಲಿ ನಿಂತಿದ್ದ ಕಾರೊಂದರ ಬಳಿ ಸಾಗುವ ವ್ಯಕ್ತಿಯೊಬ್ಬ ಮೊದಲು ಕಾರಿನ ಹಿಂಬದಿಯ ಗ್ಲಾಸ್‌ನ್ನು ಒಡೆಯುತ್ತಾನೆ. ಆನಂತರ ಆತ ಅಲ್ಲಿಂದ ಸೈಲೆಂಟ್‌ ಆಗಿ ಮುಂದಕ್ಕೆ ಹೋಗುತ್ತಾನೆ. ಕೆಲವು ಕ್ಷಣ ಬಿಟ್ಟು ಅದೇ ದಾರಿಯಲ್ಲಿ ಮತ್ತೊಬ್ಬ ಬಂದು, ಒಡೆದ ಗಾಜಿನೊಳಗೆ ಕೈ ಹಾಕಿ ಕಾರಿನ ಸೀಟಿನಲ್ಲಿದ್ದ ಹಣದ ಬ್ಯಾಗ್‌ ಎತ್ತಿಕೊಳ್ಳುತ್ತಾನೆ. ಅಲ್ಲಿಂದ ಆತನು ಎಸ್ಕೇಪ್‌ ಆಗುತ್ತಾನೆ. ದೃಶ್ಯಗಳಲ್ಲಿ ಕೃತ್ಯವೆಸಗುವ ವ್ಯಕ್ತಿಗಳಿಗೆ ಕವರ್‌ ಮಾಡುತ್ತಿರುವಂತೆ ಮತ್ತಿಬ್ಬರು ಕಾಣುತ್ತಿದ್ದಾರೆ. ಶಿವಮೊಗ್ಗ ಪೊಲೀಸರಿಗೆ ಈ ಸಂಬಂಧ ದೂರು ದಾಖಲಾಗಿಲ್ಲ ಎನ್ನಲಾಗುತ್ತಿದ್ದು, ಆದಾಗ್ಯು, ಪೊಲೀಸರೇ ಸುಮುಟೋ ಕೇಸ್‌ ದಾಖಲಿಸಿ ಇಂತಹ ತಂಡವನ್ನು ಹಿಡಿಯುವ ಅಗತ್ಯವಿದೆ

SUMMARY |   CCTV footage shows man breaking car window and stealing money from car

KEY WORDS | CCTV footage stealing money from car window  

Leave a Comment