ಶಿವಮೊಗ್ಗಕ್ಕೆ ಬಂದ ಶಿವಣ್ಣ | ಬೈರತಿ ರಣಗಲ್‌ ಎಂಟ್ರಿ ಹೇಗಿತ್ತು ನೋಡಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024 ‌ 

ಬೈರತಿ ರಣಗಲ್‌ ಸಿನಿಮಾದ ಗ್ರಾಂಡ್‌ ಸಕ್ಸಸ್‌ನಲ್ಲಿರುವ ನಟ ಶಿವಣ್ಣ ಇವತ್ತು ಶಿವಮೊಗ್ಗಕ್ಕೆ ಬಂದಿದ್ದಾರೆ. ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿರುವ ಮಲ್ಲಿಕಾರ್ಜುನ್‌ ಚಿತ್ರಮಂದಿರಕ್ಕೆ ಬಂದ ಅವರು ಅಭಿಮಾನಿಗಳ ಜೊತೆಗೆ ಬೈರತಿ ರಣಗಲ್‌ ಸಿನಿಮಾದ ಸಕ್ಸಸ್‌ನ್ನ ಹಂಚಿಕೊಂಡರು. 

ಇನ್ನೂ ಅಭಿಮಾನಿಗಳು ಶಿವಣ್ಣರಿಗಾಗಿ ಮಲ್ಲಿಕಾರ್ಜುನ ಚಿತ್ರಮಂದಿರ ಬಳಿ ಬೆಳಗ್ಗೆಯಿಂದಲೂ ಕಾಯುತ್ತಿದ್ದರು. ಬೈರತಿ ರಣಗಲ್‌ ಸ್ಟೈಲ್‌ನಲ್ಲಿ ಕ್ಯಾಸ್ಟ್ಯೂಮ್‌ ಹಾಕಿಕೊಂಡು ಹ್ಯಾಟ್ರಿಕ್‌ ಹೀರೋ ಡಾ. ಶಿವರಾಜ್‌ ಕುಮಾರ್‌ರರಿಗಾಗಿ ಕಾಯುತ್ತಿದ್ದ ಫ್ಯಾನ್ಸ್‌ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುತ್ತಿದ್ದರು. 

ಇನ್ನೂ ಶಿವಣ್ಣ ತಮ್ಮ ಪತ್ನಿ ಗೀತಾರ ಜೊತೆಗೆ ಗೋಪಿಸರ್ಕಲ್‌ಗೆ ಬರುತ್ತಲೇ ಅಭಿಮಾನಿಗಳು ಘೋಷಣೆಯನ್ನು ಕೂಗಿದರು. ಚಿತ್ರತಂಡದ ಜೊತೆ ಫ್ಯಾನ್ಸ್‌ಗಳಿಗೆ ಧನ್ಯವಾದ ತಿಳಿಸಿದ ಶಿವಣ್ಣ ಅಭಿಮಾನಿಗಳ ಅಭಿಮಾನಕ್ಕೆ ಫಿದಾ ಆದರು. 

Malenadu Today

ಈ ನಡುವೆ ಬೈರತಿ ರಣಗಲ್‌ನ ತೆಲುಗು ಹಾಗೂ ತಮಿಳು ಟ್ರೈಲರ್‌ಗಳು ರಿಲೀಸ್‌ ಆಗಿದ್ದು ಇದೇ ನವೆಂಬರ್‌ 29 ರಂದು ಬೈರಿ ರಣಗಲ್‌ ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್‌ ಆಗಲಿದೆ. ತೆಲುಗಿನ ಟ್ರೈಲರ್‌ನ್ನ ಸೂಪರ್‌ ಸ್ಟಾರ್ ನಾನಿ ರೀಲೀಸ್‌ ‌ ಮಾಡಿದರೆ, ತಮಿಳು ಟ್ರೈಲರ್‌ನ್ನ  ಮತ್ತೊಬ್ಬ ಸೂಪರ್‌ ಸ್ಟಾರ್ ಶಿವಕಾರ್ತಿಕೇಯನ್‌‌ ರಿಲೀಸ್‌ ಮಾಡಿದ್ದಾರೆ. 

 Malenadu Today

ಇನ್ನೂ ಅಭಿಮಾನಿಗಳನ್ನ ಮೀಟ್‌ ಮಾಡಿ ಮಾತನಾಡಿದ ಶಿವಣ್ಣ ಎಲ್ಲಕಡೆಗಳಲ್ಲಿ ಬೈರತಿ ರಣಗಲ್‌ ಒಳ್ಳೆಯ ರೆಸ್ಪಾನ್ಸ್‌ ಬರುತ್ತಿದೆ. ಕಲೆಕ್ಷನ್‌ ಸಹ ಚೆನ್ನಾಗಿದೆ ಎಂದರು. ಇದೇ ವೇಳೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಶಿವಣ್ಣ, ಸದ್ಯ ಆರೋಗ್ಯ ಸುಧಾರಣೆ ಆಗಿದೆ. ಮುಂದಿನ ತಿಂಗಳು ಆಪರೇಷನ್‌ ಇದೆ. ಯುಎಸ್‌ಎಗೆ ಹೋಗುತ್ತಿದ್ದೇನೆ.  ಸದ್ಯ 45 ಸಿನಿಮಾ ರೆಡಿಯಾಗುತ್ತಿದೆ. ತೆಲುಗಿನಲ್ಲಿ ರಾಮ್‌ ಚರಣ್‌ ಜೊತೆ ಒಂದು ಸಿನಿಮಾ ಮಾಡುತ್ತಿದ್ದೇನೆ. ಈಸೂರು ದಂಗೆ ಬಗ್ಗೆ ಚಿತ್ರ ಮಾಡಬೇಕು ಎಂದು ನಿರ್ದೇಶಕರ ಜೊತೆ ಮಾತನಾಡಿದ್ದೇನೆ. ಆ ಸಿನಿಮಾವನ್ನು ಮಾಡೇ ಮಾಡಲಾಗುತ್ತೆ ಎಂದರು. 



 



 

Share This Article