ಶಿವಣ್ಣರ ಆಪರೇಷನ್‌ ಸಕ್ಸಸ್‌ | ವೈದ್ಯರು ಹೇಳಿದ್ದೇನು? ಇಲ್ಲಿದೆ ಸಚಿವರೇ ನೀಡಿದ ಮಾಹಿತಿ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 25, 2024

ನಟ ಶಿವರಾಜ್‌ ಕುಮಾರ್‌ರವರಿಗೆ ನಡೆಸಿದ ಕ್ಯಾನ್ಸ್‌ರ್‌ನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಶಿವರಾಜ್‌ ಕುಮಾರ್‌ಗೆ ಶಸ್ತ್ರ ಚಿಕಿತ್ಸೆ ನಡೆಸಿದ ಅಮೆರಿಕಾದ ಮಿಯಾಮಿ ಆಸ್ಪತ್ರೆಯ ವೈದ್ಯರಾದ ಡಾ ಮನೋಹರ್‌ ತಿಳಿಸಿದರು.

ಸಚಿವ ಮಧು ಬಂಗಾರಪ್ಪರವರ ನಡೆಸಿದ ವಿಡಿಯೋ ಸಂದರ್ಶನ ಮಾದರಿಯ ವಿಡಿಯೋದಲ್ಲಿ ಶಿವಣ್ಣರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯರು ಕ್ಯಾನ್ಸ್‌ರ್‌ ತಗುಲಿದ ಭಾಗವನ್ನು ತೆಗೆದು ಹಾಕಲಾಯಿತು. ಈಗ ಶಿವಣ್ಣ ಮಾನಸಿಕ ಮತ್ತು ದೈಹಿಕವಾಗಿ ದೈರ್ಯದಿಂದಿದ್ದಾರೆ. ಶಸ್ತ್ರಚಿಕಿತ್ಸೆ ಸಮಯದಲ್ಲಿ ಮತ್ತು ಶಸ್ತ್ರ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ನಂತರವೂ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರಾಗಲಿಲ್ಲ. ಅವರು ಇನ್ನು ಕೆಲವೇ ದಿನಗಳಲ್ಲಿ ಸಾಮಾನ್ಯ ಜೀವನಕ್ಕೆ ಮರಳುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.

ಗೀತ ಶಿವರಾಜ್‌ ಕುಮಾರ್‌ ಮಾತನಾಡಿ ವೈದ್ಯರ ಶ್ರಮ ಹಾಗೂ ಅಭಿಮಾನಿಗಳೆಲ್ಲರ ಆಶಿರ್ವಾದದಿಂದ ಶಿವಣ್ಣರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಯಿತು. ಅಭಿಮಾನಿಗಳೆಲ್ಲರು ಶಿವಣ್ಣ ಬೇಗ ಗುಣಮುಖರಾಗಲೆಂದು ಅನೇಕ ಪೂಜೆ ಹೋಮಗಳಲ್ಲ ಮಾಡಿದ್ದೀರಿ ನಿಮೆಗೆಲ್ಲರಿಗೂ ಧನ್ಯವಾದಗಳು ಎಂದರು. ಹಾಗೆಯೇ ಇನ್ನು 4-5 ದಿನಗಳಲ್ಲಿ ಶಿವಣ್ಣ ನಿಮ್ಮೆಲ್ಲರ ಜೊತೆ ವಿಡಿಯೋ ಮೂಲಕ ಮಾತನಾಡುತ್ತಾರೆ ಎಂದರು.

 

SUMMARY |  Dr Manohar, a doctor at the Miami Hospital in the US, who operated on Shivarajkumar, said that the surgery for cancer performed on actor Shivarajkumar has been completed successfully.


KEYWORDS |  actor Shivarajkumar,  surgery,  Dr Manohar,

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು