SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 24, 2024
ಶಿವಮೊಗ್ಗ | ನಟ ಶಿವರಾಜ್ ಕುಮಾರ್ ಶಸ್ತ್ರ ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದು, ಅವರಿಗೆ ಮಿಯಾಮಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಇದರ ನಡುವೆ ಶಿವಣ್ಣನಿಗಾಗಿ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿದಾನದಲ್ಲಿ ಮಹಾಮೃತ್ಯುಂಜಯ ಹೋಮವನ್ನು ನೆರವೇರಿಸಲಾಯಿತು.
ಶಿವಣ್ಣನ ಅಭಿಮಾನಿ ಬಳಗ ಹಾಗೂ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಈ ಹೋಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿಗಳಾದ ರವಿಕುಮಾರ್ ರವರು ಕೆಪಿಸಿಸಿ, ಓಬಿಸಿ ಸಂಯೋಜಕ ಜಿ.ಡಿ ಮಂಜುನಾಥ್, ಮಸ್ಗಾರ್ ರಾಜಪ್ಪ, ಎಂ.ಬಿ ರವಿಕುಮಾರ್ ಪುರದಾಳ್ ರಘು, ಚೇತನ್, ಸಂದೇಶ್ ಪೂಜೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆಯೂ ಸಹ ಶಿವಣ್ಣ ಬೇಗ ಗುಣಮುಖರಾಗಲೆಂದು ಅವರ ಅಭಿಮಾನಿಗಳು ಶಿವಮೊಗ್ಗದ ಆಂಜನೇಯ ದೇವಸ್ಥಾನದಲ್ಲಿ ಈಡುಗಾಯಿ ಒಡೆದಿದ್ದರು.
ಮತ್ತೊಂದೆಡೆ ಎಂ.ಶ್ರೀಕಾಂತ್ ಅಭಿಮಾನಿಗಳ ವತಿಯಿಂದ ಶಿವರಾಜ್ ಕುಮಾರ್ ರವರಿಗೆ ಇಂದು ನಡೆಯುವ ಆಪರೇಷನ್ ಸರ್ಜರಿ ಯಶಸ್ವಿಯಾಗಲೆಂದು ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಹಾಗೆಯೇ ಶಿವರಾಜ್ ಕುಮಾರ್ ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಆಯಸ್ಸು ಕೊಟ್ಟು ಸಮಾಜದ ಸೇವೆಗೆ ಇನ್ನು ಹೆಚ್ಚಿನ ಅವಕಾಶ ಕಲ್ಪಿಸಿ ಕೊಡಲೆಂದು ದೇವಿಗೆ ವಿಶೇಷವಾದ ಹರಕೆಯನ್ನುಸಹ ಹೊರಲಾಯಿತು
ಈ ಸಂದರ್ಭದಲ್ಲಿ ಶ್ರೀಕಾಂತ್ ಅಭಿಮಾನಿ ಬಳಗದ ಅಧ್ಯಕ್ಷ ನವುಲೆ ಮಂಜು. ಪಾಲಾಕ್ಷಿ. ನಾಗರಾಜ್ ಕಂಕಾರಿ. ಗ್ಯಾರೆಂಟಿ ಯೋಜನ ಸದಸ್ಯ ಬಸವರಾಜ್.ಯುವ ಕಾಂಗ್ರೆಸ್ ನಗರ ಅಧ್ಯಕ್ಷ ವಿನಯ್, ಯುವ ಮುಖಂಡರಾದ ರಂಗನಾಥ್, ಶರತ್ . ಮಂಜು ಪುರಲೆ. ಪ್ರದೀಪ್. ರಘು ಸಿಂಗ್.ಪ್ರದೀಪ್ ಹಾಲೇಶ್.ಪ್ರಸನ್ನ ಕುಮಾರ್. ಗುರು ಪ್ರಸಾದ್. ದರ್ಶನ್. ಇನ್ನು ಮುಂತಾದವರು ಪಾಲ್ಗೊಂಡಿದ್ದರು.
SUMMARY | Actor Shivarajkumar has already left for the US for a surgery and will undergo a surgery at a Miami hospital today. Meanwhile, Mahamrityunjaya Homa was performed for Shivanna at Sri Kshetra Sigandur Chowdeshwari Sannidhanam
KEYWORDS | Actor Shivarajkumar, surgery, Sigandur Chowdeshwari,