SHIVAMOGGA | MALENADUTODAY NEWS | ಮಲೆನಾಡು ಟುಡೆ Dec 12, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಟೌನ್‌ನಲ್ಲಿನ ಲಾಡ್ಜ್ ಒಂದರಲ್ಲಿ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಈತನನ್ನ ಹೊಸನಗರ ತಾಲ್ಲೂಕಿನ ಜಿತೇಂದ್ರ ಎಂದು ಗುರುತಿಸಲಾಗಿದೆ. 33 ವರ್ಷದ ಜಿತೇಂದ್ರ ಮಹಬ್ಲೇಶ್ವರ ನಾಯ್ಕ ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಿವಾಸಿ. ಕಳೆದ ಐದು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದಲ್ಲಿ ಸ್ವಾದಿಷ್ಟ ಬೇಕರಿ ಮತ್ತು ಕ್ಯಾಂಡಿಮೆಂಟ್ಸ್ ಹೆಸರಿನ ಅಂಗಡಿ ಇಟ್ಟುಕೊಂಡಿದ್ದರು.
ಕಳೆದ ಮಂಗಳವಾರ ರಾತ್ರಿ ಇವರು ನೇಣಿಗಿ ಶರಣಾಗಿದ್ದು ನಿನ್ನೆ ವಿಷಯ ಗೊತ್ತಾಗಿದೆ. ಘಟನೆಗೆ ಮೀಟರ್ ಬಡ್ಡಿ ದಂಧೆ ಕಾರಣ ಎನ್ನಲಾಗುತ್ತಿದೆಯಾದರೂ, ಈ ಸಂಬಂಧ ಅಧಿಕೃತ ಮಾಹಿತಿ ಇನ್ನಷ್ಟೆ ಗೊತ್ತಾಗಬೇಕಿದೆ. ಸಾಗರ ಟೌನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
SUMMARY | A youth from Hosanagara committed suicide at a lodge under sagar town police station limits. He hails from Sirsi in Uttara Kannada district
KEY WORDS | youth from Hosanagara committed suicide at a lodge, sagar town police station limits, Sirsi in Uttara Kannada district