SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 18, 2024
ಶಿವಮೊಗ್ಗ| ಹುಣಸಘಟ್ಟ ಹೆಚ್ ಎಂ ಮಲ್ಲಿಕಾರ್ಜುನಪ್ಪ ಶರಣೆ ಲಿಂಗಮ್ಮ ಮಲ್ಲಿಕಾರ್ಜುನಪ್ಪ ಶರಣೆ ಶಾರದ ಎಚ್ ಎಂ ಚಂದ್ರ ಶೇಖರಪ್ಪ ದತ್ತಿ ವತಿಯಿಂದ ಶರಣ ಸಂಗಮ 298 ಕಾರ್ಯಕ್ರಮವನ್ನು ಇದೇ ಡಿ ಸೆಂಬರ್ 20 ರಂದು ಸಂಜೆ 6:3ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಸಲಾಗುವುದು. ಆ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ವೈದ್ಯಕೀಯ ವೃತ್ತಿಪರರಾದ ಡಾ, ಶಾಲಿನಿ ನಲ್ವಾಡ್ ರವರನ್ನು ಸನ್ಮಾನಿಸಲಾಗುವುದು ಎಂದು ಮಾಜಿ ಶಾಸಕರಾದ ಹೆಚ್ ಎಂ ಚಂದ್ರ ಶೇಕರಪ್ಪ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಕ್ಕಿನ ಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಸ್ವಾಮಿಯವರು ಹಾಗೂ ತುಮಕೂರು ಸಿದ್ದಲಿಂಗ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳು ನಡೆಸಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಜಿ ಬೆನಕಪ್ಪ ವಹಿಸಲಿದ್ದಾರೆ. ಎಂದರು.

ಶಾರದ ಹೆಚ್ ಎಂ ಚಂದ್ರಶೇಕರಪ್ಪ ದತ್ತಿವತಿಯಿಂದ 2019 ರಿಂದ ಪ್ರತಿವರ್ಷ ಡಿಸೆಂಬರ್ 20 ರಂದು ವಿದ್ಯೆ, ಕ್ರೀಡೆ ಹಾಗೂ ಇತರೆ ವಲಯಗಳಲ್ಲಿ ಹೆಸರು ಮಾಡಿದವರಿಗೆ ಈ ಪ್ರಶಸ್ತಿಯನ್ನು ಕೊಡುತ್ತಿದ್ದೇವೆ. ಈ ಬಾರಿಯೂ ಕೂಡ ಪ್ರಸಿದ್ದ ವೈದ್ಯೆ ಮತ್ತು ಐಕ್ಯಾಟ್ ಅಧ್ಯಕ್ಷೆ, ಏರ್ ಅಂಬ್ಯುಲೆನ್ಸ್ ಸೇವೆ ಮಾಡುತ್ತಿರುವ ಡಾ.ಶಾಲಿನಿ ನಲ್ವಾಡ್ ಅವರನ್ನು ಸನ್ಮಾನಿಸಲಾ ಗುತ್ತದೆ. ಇವರ ಜೊತೆಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಿ.ಹೆಚ್.ವೆಂಕಟೇಶ್ ಅವರನ್ನು ಅಭಿನಂದಿಸಲಾಗುವುದು ಎಂದರು.
SUMMARY | Hunaghatta H.M. Mallikarjunappa Sharane Lingamma Mallikarjunappa Sharane Sharada H.M. Chandrashekarappa Datti will be conducting Sharana Sangama 298 programme on Dec. 20 at 6.3 pm at Kuvempu Rangamandira
KEYWORDS | Sharada H.M. Chandrashekarappa Datti, Kuvempu Rangamandira, dr shalini nalpad,