SHIVAMOGGA | MALENADUTODAY NEWS | ಮಲೆನಾಡು ಟುಡೆ Dec 3, 2024
ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಯ ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಇವತ್ತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಪ್ರಕರಣದ ಕುರಿತಾಗಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಸರ್ಕಾರವನ್ನು ಪ್ರತಿನಿಧಿಸಿ ವಕೀಲ ವಿ.ಎನ್.ರಘುಪತಿರವರು ವಾದ ಮಂಡಿಸಲಿದ್ದಾರೆ. ಇವರ ಜೊತೆ ಕಾನೂನು ತಜ್ಞ ದೇವದಾಸ ಕಾಮತ್ ಅವರನ್ನು ಪ್ರಕರಣದಲ್ಲಿ ವಿಶೇಷವಾಗಿ ರಾಜ್ಯಸರ್ಕಾರ ನಿಯೋಜಿಸಿದೆ.
9139 ಎಕೆರೆ ಭೂಮಿಯನ್ನ ಅರಣ್ಯ ಇಲಾಖೆಯಿಂದ ಡಿನೋಟಿಫೈ ಮಾಡಿ ಸರ್ಕಾರ ಸಂತ್ರಸ್ತರಿಗೆ ಹಕ್ಕುಪತ್ರ ನೀಡಿತ್ತು. ಆದರೆ ಈ ಕ್ರಮವನ್ನ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಇದೀಗ ಸುಪ್ರೀಂಕೋರ್ಟ್‌ನ ತೀರ್ಮಾನದ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಈ ಮೇಲ್ಮನವಿಯ ವಿಚಾರಣೆ ಇವತ್ತು ಆರಂಭವಾಗಲಿದೆ.
SUMMARY | Supreme Court will hear the sharavathi victims’ land title deeds today.
KEY WORDS | Supreme Court will hear the sharavathi victims land title deeds