SHIVAMOGGA | MALENADUTODAY NEWS | ಮಲೆನಾಡು ಟುಡೆ Feb 4, 2025
ಶಿವಮೊಗ್ಗ ಟ್ರಾಫಿಕ್ ಪೊಲೀಸ್ ವೀಲ್ಹಿಂಗ್ ಶೂರರ ಮೇಲೆ ಖಾಕಿ ಕಣ್ಣಿಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಓರ್ವ ಯುವಕನಿಗೆ ವಿಲ್ಹೀಂಗ್ ಮಾಡಿದ ತಪ್ಪಿಗೆ ಐದು ಸಾವಿರ ರೂಪಾಯಿ ದಂಡವನ್ನು ಕೋರ್ಟ್ ಮೂಲಕ ವಿಧಿಸಿದೆ.
ಶಿವಮೊಗ್ಗ ಟ್ರಾಫಿಕ್ ಪೊಲೀಸ್
ದಿನಾಂಕ 30..01.2025ರಂದು ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಮತ್ತು ಸಿಬ್ಬಂದಿ ಪ್ರಕಾಶ್ ಎ.ಆರ್.ಎಸ್.ಐ. ಪ್ರವೀಣ್ ಪಾಟೀಲ್ ಹೆಚ್.ಸಿ. ದಿನೇಶ್ ಪಿ.ಸಿ, ಹರೀಶ್ ಪಿ.ಸಿ, ಗೌರವ ಲಾಡ್ಜ್ ಬಳಿ ವಾಹನ ತಪಾಸಣೆ ನಡೆಸಿದ್ದರು. ವಿಸಿಬಲ್ ಅಫೆನ್ಸ್ ಹೊಂದಿದ ವಾಹನಗಳನ್ನ ಅಡ್ಡಗಟ್ಟಿ ದಾಖಲಾತಿ ಪರಿಶೀಲನೆ ನಡೆಸ್ತಿದ್ದರು.
ಈ ವೇಳೆ ಅಲ್ಲಿಯೇ ಯುವಕನೊಬ್ಬ ವೀಲ್ಹೀಂಗ್ ಮಾಡಿಕೊಂಡು ಬೈಕ್ ಓಡಿಸಿದ್ದಾನೆ. ಇದನ್ನ ಗಮನಿಸಿ ಅತನ ಬೈಕ್ ಅಡ್ಡಗಟ್ಟಿದ ಪೊಲೀಸರು ದಾಖಲಾತಿ ಪರಿಶೀಲಿಸಿ ಪ್ರಕರಣ ದಾಖಲಿಸಿ,ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ನಿನ್ನೆ ದಿನ ಬೈಕ್ ಸವಾರನಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ
ಶಿವಮೊಗ್ಗ ಎಸ್‌ಪಿ ರೀಲ್ಸ್
ಇನ್ನು ಇದೇ ವಿಚಾರದಲ್ಲಿ ಬೈಕ್ ವಿಲ್ಹೀಂಗ್ ಮಾಡುವುದು ತಪ್ಪು ಹಾಗೂ ಹಾಗೆ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ ಮತ್ತು ಸುರಕ್ಷಿತವಾಗಿ ಬೈಕ್ ಚಲಾಯಿಸಿ ಎನ್ನುವ ಸಂದೇಶ ಹೊಂದಿದ ರೀಲ್ಸ್ ಎಡಿಟ್ ಮಾಡಿ ಎಸ್‌ಪಿ ಮಿಥುನ್ ಕುಮಾರ್‌ರವರ ಫೋಟೋದೊಂದಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಪೋಸ್ಟ್ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.
SUMMARY | Shivamogga Traffic Police fines biker for wheeling Rs 5,000, says Shivamogga SP Mithun Kumar
KEY WORDS | Shivamogga Traffic Police fines, bike wheeling fine, Shivamogga SP Mithun Kumar