SHIVAMOGGA | MALENADUTODAY NEWS | ಮಲೆನಾಡು ಟುಡೆ Feb 6, 2025
ರಾಜಕೀಯ ನಾಯಕರ ಕಾರ್ಯಕ್ರಮಗಳು ಮೊದಲೇ ನಿಶ್ಚಯ ಆಗಿರುತ್ತದೆ. ಪ್ರತಿದಿನ ಕಾರ್ಯಕ್ರಮಗಳ ಪಟ್ಟಿಯಂತೆ ನಾಯಕರು ನಿಗದಿತ ಸ್ಥಳಕ್ಕೆ ಭೇಟಿ ನೀಡಿರುತ್ತಾರೆ. ಇದರ ನಡುವೆ ತಮ್ಮ ಎದುರಾಳಿಗಳ ಭೇಟಿ ಆಗದಂತೆ ಎಚ್ಚರ ವಹಿಸಿದರೂ ಕೆಲವೊಮ್ಮೆ ಅನಿವಾರ್ಯ ಸನ್ನಿವೇಶ ಎದುರಾಗಿ ಬಿಡುತ್ತದೆ. ಇದೀಗ ಸಾಗರ ತಾಲ್ಲೂಕುನಲ್ಲಿ ಅಂತಹಃ ಒಂದು ಸನ್ನಿವೇಶ ಎದುರಾಗಿತ್ತು. ಮಾಜಿ ಶಾಸಕ ಹರತಾಳು ಹಾಲಪ್ಪ ಹಾಗೂ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಪರಸ್ಪರ ಎದುರು ಬದುರಾದ ಘಟನೆ ಯಲ್ಲಮ್ಮ ದೇವಿ ದೇವಸ್ಥಾನನದಲ್ಲಿ ನಡೆದಿದೆ. ಇಬ್ಬರು ನಾಯಕರು ಒಂದೇ ಸಮಯದಲ್ಲಿ ದೇವಾಲಯದಲ್ಲಿ ಪರಸ್ಪರ ಎದುರಾದರು. ಆದರೆ ಇಬ್ಬರು ಸಹ ಪರಸ್ಪರ ಮಾತನಾಡಲಿಲ್ಲ. ನಾಯಕರ ಜೊತೆಗಿದ್ದವರು ನಕ್ಕು ಕ್ಷೇಮವೇ ಎಂದು ಕೈ ಮುಗಿದು ಮುಂದಕ್ಕೆ ಸಾಗಿದರು. ಆದರೆ ಇಬ್ಬರು ಮಾಜಿ ಸ್ನೇಹಿತರು ಅಲ್ಲಿದ್ದವರಿಗೆ ಕೈ ಮುಗಿಯುತ್ತಾ, ಪರಸ್ಪರ ನೋಡದೇ ಮುಂದಕ್ಕೆ ಸಾಗಿದರು.
ನಿನ್ನೆ ಬುಧವಾರ ಸಂಜೆ ಈ ಸನ್ನಿವೇಶದಕ್ಕ ಯಲ್ಲಮ್ಮ ದೇವಿಯ ದೇವಸ್ಥಾನ ಸಾಕ್ಷಿಯಾಗಿತ್ತು. ನಗರದ ಸೂರಬ ರಸ್ತೆಯಲ್ಲಿ ಇರುವ ಶ್ರೀ ಯಲ್ಲಮ್ಮ ದೇವಿ ಪುನರ್ ಪ್ರತಿಷ್ಠಾಪನಾ ಹಾಗೂ ನೂತನ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಾಲಯದಿಂದ ಹೊರಕ್ಕೆ ಬರುತ್ತಿದ್ದರು ಬೇಳೂರು ಗೋಪಾಲಕೃಷ್ಣರವರು. ಅದೇ ವೇಳೆ ದೇವಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇವಾಲಯಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಇಬ್ಬರು ಸಹ ಎದುರುಬದರಾದರು.
ಬೇಳೂರು ಗೋಪಾಲಕೃಷ್ಣರವರನ್ನು ನೋಡುತ್ತಲೇ ಮಾಜಿ ಶಾಸಕ ಹರತಾಳು ಹಾಲಪ್ಪರವರ ಜೊತೆಗೆ ಬಂದಿದ್ದ ಟಿಡಿ ಮೇಘರಾಜ್‌ರವರು ಹಾಲಿ ಶಾಸಕರಿಗೆ ವಿಶ್ ಮಾಡಿದರು, ಪ್ರತಿಯಾಗಿ ಬೇಳೂರು ಗೋಪಾಲಕೃಷ್ಣರವರು ಸಹ ಏನ್ ಸಾರ್ ಎಂದು ವಿಶ್ ಮಾಡಿ ಅಲ್ಲಿದ್ದವರಿಗೆ ಕೈ ಮುಗಿಯುತ್ತಾ ಮುಂದಕ್ಕೆ ಸಾಗಿದರು. ಇತ್ತ ಬೇಳೂರು ಗೋಪಾಲಕೃಷ್ಣರವರ ಜೊತೆಗಿದ್ದವರು ಸಹ ಹರತಾಳು ಹಾಲಪ್ಪರವರನ್ನು ವಿಚಾರಿಸಿದರು. ಅವರನ್ನ ಮಾತನಾಡಿಸುತ್ತಾ ಮಾಜಿ ಶಾಸಕರು ಆವರಣದ ಒಳಗೆ ತೆರಳಿದರು.
View this post on Instagram
SUMMARY | Former MLA Haratalu Halappa and sitting MLA Belur Gopalakrishna were seen at the temple.
KEY WORDS | Former MLA Haratalu Halappa, sitting MLA Belur Gopalakrishna