SHIVAMOGGA | MALENADUTODAY NEWS | ಮಲೆನಾಡು ಟುಡೆ | 13.11.2024
ಶಿವಮೊಗ್ಗ| ವಕ್ಫ್ ಕಾಯಿದೆಯನ್ನು ಕಾನೂನು ಬದ್ಧವಾಗಿ ತೀರ್ಮಾನ ಮಾಡದಿದ್ದರೆ ನಿಮ್ಮ ಆಸ್ತಿಗೂ ಮುದೊಂದು ದಿನ ತೊಂದರೆ ಆಗುತ್ತೆ ಎಂದು ಕಾಂಗ್ರೆಸ್ ಮುಖಂಡರಿಗೆ ಮಾಜಿ ಡಿಸಿಎಂ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಪ್ರಮುಖವಾಗಿ ಮೂರು ವಿಚಾರಗಳ ಕುರಿತಾಗಿ ಇಂದು ಶಿವಮೊಗ್ಗದಲ್ಲಿನ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಇತ್ತೀಚೆಗೆ ಮುಸಲ್ಮಾನರು ಮಾಡುತ್ತಿರುವ ಆಚಾತುರ್ಯವನ್ನು ಕಾಂಗ್ರೆಸ್ ಕಂಡೂ ಕಾಣದಂತೆ ಕುಳಿತಿದೆ. ಅದರ ಪರಿಣಾಮವಾಗಿಯೇ ರಾಜ್ಯದ ರೈತರ ಭೂಮಿ ವಕ್ಫ್ ಹೆಸರಿನಲ್ಲಿ ಮುಸಲ್ಮಾನರ ಕೈ ಸೇರುತ್ತಿದೆ.
ವಿಶ್ವೇಶ್ವರಯ್ಯ ಅವರು ಹುಟ್ಟಿದ ಜಾಗವನ್ನು ಸಹ ವಕ್ಫ್ ಹೆಸರಿಗೆ ಮಾಡಲು ಹೊರಟಿದ್ದಾರೆ. ಆದರೆ ಇದನ್ನು ವಿರೋಧಿಸಿ ಯಾವೊಬ್ಬ ಕಾಂಗ್ರೆಸ್ ನಾಯಕರು ಮಾತನಾಡಲಿಲ್ಲ ಎಂಬುದು ವಿಪರ್ಯಾಸ ಎಂದರು,
ಕಾಂಗ್ರೆಸ್‌ನ ನಾಯಕರೊಬ್ಬರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇಸ್ಲಾಂ ಧರ್ಮಕ್ಕೆ ಸೇರಲು ಬಯಸಿದ್ದರು ಎಂದು ಹೇಳಿದ್ದಾರೆ. ಅಂತಹಾ ಮಹಾನ್ ನಾಯಕರ ಬಗ್ಗೆ ಈ ರೀತಿಯ ಮಾತುಗಳನ್ನು ಆಡಲು ಅವರಿಗೆ ಎಷ್ಟು ಸೊಕ್ಕಿರಬೇಕು ಎಂದು ಕೆಎಸ್‌ಇ ಕಿಡಿಕಾರಿದರು,
ಕಾಂಗ್ರೆಸ್ ಪಕ್ಷ ಇಸ್ಲಾಮೀಕರಣಕ್ಕೆ ನೇರ ಬೆಂಬಲ ಕೊಡ್ತಿದೆ ಎಂದು ಆರೋಪಿಸಿದ ಕೆಎಸ್ ಈಶ್ವರಪ್ಪ ಶೇ.4 ರಷ್ಟು ಗುತ್ತಿಗೆ ಮೀಸಲಾತಿ ಚರ್ಚೆ ನಡೀತಿದೆ, ಆ ಬಗ್ಗೆ ಸಿಎಂ ಪರಿಶೀಲಿಸಿ ಅಂತ ಬರೆದು ರವಾನಿಸಿದ್ದಾರೆ. ಇವರು ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಎಂದು ಪ್ರಶ್ನಿಸಿದರು.
ಇದೇ ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುವ ಸನ್ನಿವೇಶ ಬರುತ್ತದೆ. ಹಿಂದೂಗಳು ಜಾಗೃತರಾದರೆ ಎಲ್ಲೆಲ್ಲಿ ಕೊಲೆಗಳಾಗುತ್ತೆ ಅನ್ನೋದು ಹೇಳಲು ಸಾಧ್ಯವಿಲ್ಲ ಎಂದ ಕೆಎಸ್‌ಇ ಕಾಂಗ್ರೆಸ್‌ನವರ ನಡೆಯನ್ನ ಯಾರು ಸಹ ಒಪ್ಪಲು ಸಾಧ್ಯವಿಲ್ಲ. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಕಾಂಗ್ರೆಸಿಗರನ್ನು ಹುಡುಕಿ ಹೊಡೆಯುವ ಕಾಲ ಬರುತ್ತೆ. ಕಾಂಗ್ರೆಸ್ ಮಿತ್ರರೇ ಓಟಿಗಾಗಿ ಇಂತಹ ಕೆಲಸಗಳನ್ನು ಮಾಡಬೇಡಿ ಎಂದು ಎಚ್ಚರಿಸಿದರು
SUMMARY| Eshwarappa warned congressmen that if the Waqf Act is not decided legally, then your property will suffer one day.
KEY WORDS | Eshwarappa, waqf, congress, karanatakagovt, politicalnews,