SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 13, 2025
ಶಿವಮೊಗ್ಗ | ದೆಹಲಿಯಲ್ಲಿ ಕಳೆದ 45 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದು ಕೇಂದ್ರ ಸರ್ಕಾರ ಆ ಹೋರಾಟಕ್ಕೆ ಯಾವುದೇ ಪ್ರತಿಕ್ರಿಯೇ ನೀಡದಿರುವುದನ್ನು ವಿರೋಧಿಸಿ ಇಂದು ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತರು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ರವರ ಪ್ರತಿಕೃತಿ ದಹನ ಮಾಡಿದರು.
ಕೇಂದ್ರ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ರೈತರ ಬೆಳೆಗೆ ಶಾಸನ ಬದ್ದವಾಗಿ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಬೇಕು ಹಾಗೆಯೇ ಕೇಂದ್ರ ಸರ್ಕಾರ ಕೃಷಿ ಬೆಳೆಗೆ ಎಂಎಸ್‌ಪಿ ನಿಗದಿ ಪಡಿಸಬೇಕೆಂದು ಜಗಜೀತ್ ದುಲ್ಲೇವಾಲ ಕಳೆದ 45 ದಿನಗಳಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ ನರೇಂದ್ರ ಮೋದಿಯವರು ಇದನ್ನು ಕಂಡರೂ ಕಾಣದಂತೆ ಕುಳಿತಿದ್ದಾರೆ ಎಂದು ರೈತರು ಆರೋಪಿಸಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಯನ್ನುಕೂಗಿದ ರೈತರು ನಂತರ ಮಹಾವೀರ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ರವರ ಪ್ರತಿಕೃತಿ ದಹನ ಮಾಡಿದರು
SUMMARY | Farmers of the State Raitha Sangha and Harijan Sena burnt effigies of Prime Minister Narendra Modi, Home Minister Amit Shah and Union Agriculture Minister Shivraj Singh.
KEYWORDS | Farmers, State Raitha Sangha, Narendra Modi, Amit Shah,