SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024
ಕೇಂದ್ರ ಸರ್ಕಾರ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಯಾವುದೇ ಅಡಮಾನ ಇಡದೇ ಪಡೆಯುವ ಸಾಲದ ಮಿತಿಯನ್ನು 2 ಲಕ್ಷ ರೂಪಾಯಿಗೆ ಏರಿಸಿದೆ.ಬ್ಯಾಂಕ್ಗಳಲ್ಲಿ ಕೃಷಿ ಹಾಗೂ ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಯಾವುದೇ ಭದ್ರತೆ ಒದಗಿಸಿದೆ ರೈತರು ಪಡೆಯ ಬಹುದಾದ ಸಾಲದ ಮಿತಿ ಈ ಮೊದಲು 1.60 ಲಕ್ಷ ರೂಪಾಯಿ ಇತ್ತು. ಇದೀಗ ಇದರ ಮಿತಿಯನ್ನು 2 ಲಕ್ಷ ರೂಪಾಯಿಗೆ ಏರಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನ ಆದೇಶವು ಜನವರಿ 1ರಿಂದ ಜಾರಿಗೆ ಬರಲಿದೆ. ಅಲ್ಲದೆ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿಗದಿಪಡಿಸಿರುವ ಈ ಸಾಲವನ್ನು ಯಾವುದೇ ಭದ್ರತೆ ಇಲ್ಲದೆ ನೀಡಬೇಕು ಎಂದು ಎಲ್ಲಾ ಬ್ಯಾಂಕ್ಗಳಿಗೆ ನಿರ್ದೇಶನ ನೀಡಿದೆ.

SUMMARY | Reserve Bank of India has increased the limit for unsecured loans to Rs 2 lakh.
KEY WORDS | Reserve Bank of India, unsecured loans to Rs 2 lakh