SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 29, 2025
ಶಿವಮೊಗ್ಗ | ಶ್ರಿ ರಾಮಸೇನಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ನೂತನ ಕೇಂದ್ರ ಕಚೇರಿಯು ರಾಮಣ್ಣ ಶೆಟ್ಟಿ ಪಾರ್ಕ್ ವೃತ್ತದ ಮುಂಬಾಗದಲ್ಲಿ ಜನವರಿ 31 ರಂದು ಶುಭಾರಂಭಗೊಳ್ಳಲಿದೆ ಎಂದು. ಸೊಸೈಟಿಯ ಅಧ್ಯಕ್ಷರಾದ ಸಂತೋಷ್ ಸಾಕ್ರೆ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶ್ರಿ ರಾಮಸೇನಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಗೆ ಸುಮಾರು 107 ವರ್ಷದ ಇತಿಹಾಸವಿದೆ.
ಅಂದಿನಿಂದ ನಮ್ಮ ಸೊಸೈಟಿಯು ನಮ್ಮ ಷೇರುದಾರರಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸುತ್ತಾ ಬಂದಿದೆ. ಷೇರುದಾರರಿಗೆ ಇನ್ನೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ನೂತನ ಕಟ್ಟಡವನ್ನು ನಿರ್ಮಿಸಿದ್ದೇವೆ.
ಅದರ ಉದ್ಘಾಟನೆ ಜನವರಿ 31 ರಂದು ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ, ಸಂಸದರಾದ ಬಿವೈ ರಾಘವೇಂದ್ರ, ಶಿವಮೊಗ್ಗ ನಗರ ಶಾಸಕರಾದ ಚೆನ್ನಬಸಪ್ಪ ಸೇರಿದಂತೆ ಪ್ರಮುಖರು ಭಾಗವಹಿಸುವರು ಎಂದರು.
SUMMARY | The new headquarters of Sri Ramasena Bhasavara Kshatriya Credit Co-operative Society will be inaugurated on January 31 in front of Ramanna Shetty Park Circle. Santosh Sakhre, president of the society, said.
KEYWORDS | Ramanna Shetty Park, Co-operative Society, inaugurated,