ಶಿವಮೊಗ್ಗಕ್ಕೆ ರಾಷ್ಟ್ರೀಯ ಪುರಸ್ಕಾರ ತಂದು ಕೊಟ್ಟ ನೀರು ಬಳಕೆದಾರರ ಸಹಕಾರ ಸೊಸೈಟಿ | ವಿಶೇಷ ಇಲ್ಲಿದೆ
Shimoga water users association bagged the second position in the national water award in the category of best water users association in the country. Water Users' Co-operative Society of Kagekodamagge in Shivamogga.

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 28, 2024
ಶಿವಮೊಗ್ಗ | ಇಲ್ಲಿನ ನೀರು ಬಳಕೆದಾರ ಸಂಘವೊಂದು ದೇಶದಲ್ಲಿಯೇ ಅತ್ಯುತ್ತಮ ನೀರು ಬಳಕೆದಾರ ಸಂಘ ವಿಭಾಗದಲ್ಲಿ ನೀಡುವ ರಾಷ್ಟ್ರೀಯ ಜಲಪುರಸ್ಕಾರದ ಪ್ರಶಸ್ತಿಯಲ್ಲಿ ಎರಡನೇ ಸ್ಥಾನವನ್ನ ಪಡೆದುಕೊಂಡಿದೆ. ಶಿವಮೊಗ್ಗದ ಕಾಗೆಕೋಡಮಗ್ಗೆಯ ನೀರು ಬಳಕೆದಾರರ ಸಹಕಾರ ಸೊಸೈಟಿ ಈ ಪುರಸ್ಕಾರಕ್ಕೆ ಭಾಜನವಾಗಿದೆ. ಕಳೆದ ಅಕ್ಟೋಬರ್ 22 ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸೊಸೈಟಿ ಮುಖಂಡರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ರಾಷ್ಟ್ರೀಯ ಜಲ ಪ್ರಶಸ್ತಿಯ ಪೈಕಿ ಒಡಿಶಾ, ಉತ್ತರ ಪ್ರದೇಶ ಹಾಗೂ ಗುಜರಾತ್ ಕ್ರಮವಾಗಿ ಮೊದಲ, ದ್ವಿತಿಯ ಹಾಗೂ ತೃತಿಯ ಸ್ಥಾನವನ್ನ ಪಡೆದಿವೆ. ಇನ್ನೂ ಕೇಂದ್ರ ಜಲಶಕ್ತಿ ಸಚಿವಾಲಯ ಒಟ್ಟು 9 ವಿವಿಧ ವಿಭಾಗಗಳಲ್ಲಿ 38 ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಇದರಲ್ಲಿ “ಅತ್ಯುತ್ತಮ ನಾಗರಿಕ ಸಮಾಜ' ಎಂಬ ವಿಭಾಗದಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ವ್ಯಕ್ತಿ ವಿಕಾಸ ಕೇಂದ್ರ ಪುರಸ್ಕಾರ ಪಡೆದಿದೆ.
ಅತ್ಯುತ್ತಮ ನೀರು ಬಳಕೆದಾರ ಸಂಘ ವಿಭಾಗದಲ್ಲಿ ಶಿವಮೊಗ್ಗದ ಕಾಗೆಕೋಡಮಗ್ಗೆಯ ನೀರು ಬಳಕೆದಾರರ ಸಹಕಾರ ಸೊಸೈಟಿ ಎರಡನೇ ಸ್ಥಾನ ಗಳಿಸಿದೆ.
SUMMARY | Shimoga water users association bagged the second position in the national water award in the category of best water users association in the country. Water Users' Co-operative Society of Kagekodamagge in Shivamogga.
KEYWORDS | Shimoga water users association, national water award in the category, best water users association in the country, Water Users' Co-operative Society of Kagekodamagge in Shivamogga.