SHIVAMOGGA| MALENADUTODAY NEWS | ಮಲೆನಾಡು ಟುಡೆ Mar 7, 2025
ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಬಟ್ಟೆ ತೊಳೆಯಲು ನಾಲೆಗೆ ಇಳಿದಿದ್ದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ರಾಗಿಗುಡ್ಡದ ನಿವಾಸಿ ರೇಷ್ಮಾಬಾನು (33) ಎಂಬುವರು ಮೃತರು.
ನಿನ್ನೆ ದಿನದ ರಾಗಿಗುಡದ ಬಳಿಯ ನಾಲೆಯಲ್ಲಿ ಕೊಳೆಬಟ್ಟೆ ತೊಳೆಯುವ ಸಲುವಾಗಿ ರೇಷ್ಮಾರವರು ತೆರಳಿದ್ದರು. ಆನಂತರ ಅವರು ಮನೆಗೆ ಬಂದಿರಲಿಲ್ಲ. ಹೀಗಾಗಿ ಅನುಮಾನಗೊಂಡ ಮನೆಯವರು ನಾಲೆ ಬಳಿ ಹೋಗಿ ಪರಿಶೀಲಿಸಿದ್ದಾರೆ. ನಾಲೆ ಬಳಿ ಬಟ್ಟೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇನ್ನಷ್ಟು ಅನುಮಾನ ಮೂಡಿ ಪೊಲೀಸರಿಗೆ ಕುಟುಂಬಸ್ಥರು ಕರೆ ಮಾಡಿ ವಿಷಯ ತಿಳಿಸಿದರು.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಜೊತೆ ಬಂದ ಪೊಲೀಸರು ನಾಲೆಯಲ್ಲಿ ಹುಡುಕಾಟ ನಡೆಸಿದರು. ಕೆಲವು ಗಂಟೆಗಳ ಕಾರ್ಯಾಚರಣೆ ಬಳಿಕ ಸಂಜೆ ರೇಷ್ಮಾರವರ ಮೃತದೇಹ ನಾಲೆಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.