ರಬ್ಬರ್ ತೋಟದಲ್ಲಿ ಗೋಹತ್ಯೆ , ಜನರ ಕೈಗೆ ಸಿಕ್ಕಿಬಿದ್ದ ಆರೋಪಿ | ತುಂಗಾ ನದಿಗೆ ಹಾರಿ ಯುವಕ ಸಾವು | ಹೊಳೆಹೊನ್ನೂರಲ್ಲಿ ಎನಾಯ್ತು ಗೊತ್ತಾ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 25, 2025 ‌‌ ‌‌

ಸುದ್ದಿ 1 : ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಜಯಂತಿ ಕಾಲೊನಿ ಗ್ರಾಮದ ರೈತ ಕೆ.ಕಣಬೂರು ದೇವು (57) ಸಮೀಪದ ತುಂಗಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4 ಎಕರೆ ಜಮೀನು ಹೊಂದಿದ್ದ ಇವರು  ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಸಾಲ ತೀರಿಸಲಾಗಿದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸುದ್ದಿ 2 : ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಬೊಮ್ಮನಕಟ್ಟೆಯಲ್ಲಿ 32 ವರುಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸಿಕ ಸಮಸ್ಯೆ ಹೊಂದಿದ್ದ ಯುವಕ ಕೂಲಿಕೆಲಸ ಮಾಡಿಕೊಂಡಿದ್ದ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ 3 : ಸಾಗರ ತಾಲ್ಲೂಕು ತ್ಯಾಗರ್ತಿ ಗ್ರಾಮದಲ್ಲಿರುವ ರಬ್ಬರ್ ತೋಟವೊಂದರಲ್ಲಿ ಗೋಹತ್ಯೆ ಮಾಡುತ್ತಿದ್ದ ಆರೋಪ ಸಂಬಂದ ಸ್ಥಳೀಯರು ಸ್ಥಳಕ್ಕೆ ತೆರಳಿ ಓರ್ವ ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Share This Article